×
Ad

ದ.ಕ ಜಿಲ್ಲೆಯ ಅಭಿವೃದ್ಧಿಗೆ ನಳೀನ್ ಕುಮಾರ್ ಕಟೀಲ್ ಕೊಡುಗೆ ಏನೂ ಇಲ್ಲ: ರಮಾನಾಥ ರೈ

Update: 2019-03-27 19:15 IST

ಕಡಬ: ಕಳೆದ ಹತ್ತು ವರ್ಷಗಳಿಂದ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್ ಅವರು ಜಿಲ್ಲೆಯ ಅಭಿವೃದ್ದಿಗೆ ನೀಡಿದ ಕೊಡುಗೆ ಏನೇನೂ ಇಲ್ಲ. ಇವರ  ವೈಫಲ್ಯವೇ ಈ ಬಾರಿ ದ.ಕ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್  ಗೆಲುವಿಗೆ ಕಾರಣವಾಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಬುಧವಾರದಂದು ಕಡಬ ಕಾಂಗ್ರೇಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಿಲ್ಲೆಯಲ್ಲಿ ಭಾವನಾತ್ಮಕ  ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನು ಮೋಸ ಮಾಡಿ ಕೋಮು ಭಾವನೆಗಳನ್ನು ಕೆರಳಿಸಿ ಮತಗಳಾಗಿ ಪರಿವರ್ತಿಸಿ ಕಳೆದ 30 ವರ್ಷಗಳಿಂದ ಗೆದ್ದಿರು ವುದು ನಮ್ಮ ಜಿಲ್ಲೆಯ ದುರಂತವಾಗಿದೆ. ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಇರುವಾಗ ಮಂಗಳೂರಿನ ಬಂದರು, ವಿವಿಧ ಕೈಗಾರಿಕೆಗಳು, ರೈಲ್ವೆ ನಿಲ್ದಾಣ ಪಾರ್ಸ್‍ಪೊರ್ಟ್ ಪ್ರಾದೇಶಿಕ ಕಚೇರಿಗಳು, ವಿಮಾನ ನಿಲ್ದಾಣ, ಮುಂತಾದ ಮಹತ್ತರವಾದ ಅಬಿವೃದ್ಧಿ ಕಾರ್ಯಗಳನ್ನು ಮಾಡಿ  ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಪಂಚಾಯತ್  ಸದಸ್ಯ ಪಿ.ಪಿ ವರ್ಗೀಸ್ , ಕಡಬ ಬ್ಲಾಕ್  ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆ, ಕಾಂಗ್ರೇಸ್ ಮುಖಂಡರಾದ ಡಾ. ರಘು ಬೆಳ್ಳಿಪ್ಪಾಡಿ, ಕೃಷ್ಣಪ್ಪ ಸಕಲೇಶಪುರ, ವಿಜಯ್ಕುಮಾರ್ ರೈ, ರಾಯ್ ಅಬ್ರಾಹಂ, ಎಚ್.ಕೆ ಇಲ್ಯಾಸ್,  ಸರ್ವೋತ್ತಮ ಗೌಡ,  ಕೆ.ಪಿ ತೋಮಸ್,  ಫಝಲ್ ಕೋಡಿಂಬಾಳ, ಕೆ.ಟಿ.ವಲ್ಸಮ್ಮ, ಉಷಾ ಅಂಚನ್, ಆಶಾ ಲಕ್ಷ್ಮಣ್ , ಸೈಮನ್ ಸಿ.ಜೆ, ಡೆನ್ನಿಸ್ ಫೆರ್ನಾಂಡಿಸ್,ಬಾಬು ಮುಗೇರ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News