ವೆನೆಝುವೆಲದಲ್ಲಿ ಬಂದಿಳಿದ ರಶ್ಯ ಸೇನೆ: ಆಂತರಿಕ ಕಲಹ ಉಲ್ಬಣ

Update: 2019-03-27 15:43 GMT

ಮಾಸ್ಕೋ, ಮಾ. 27: ಕಳೆದ ವಾರಾಂತ್ಯದಲ್ಲಿ ರಶ್ಯ ಸೇನಾ ಸಿಬ್ಬಂದಿ ವೆನೆಝುವೆಲಗೆ ಬಂದಿದ್ದು, ಅವರಿಗೆ ಅಲ್ಲಿರಲು ಎಲ್ಲಾ ಹಕ್ಕುಗಳಿವೆ ಎಂದು ರಶ್ಯದ ವಿದೇಶ ಸಚಿವಾಲಯ ಹೇಳಿದೆ.

ವೆನೆಝುವೆಲದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ವಿಚಾರದಲ್ಲಿ ಅಮೆರಿಕ ಮತ್ತು ರಶ್ಯಗಳ ನಡುವಿನ ಭಿನ್ನಾಭಿಪ್ರಾಯ ವಿಸ್ತರಿಸಿರುವ ನಡುವೆಯೇ, ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊಗೆ ಸಹಾಯ ಮಾಡಲು ರಶ್ಯ ಆ ದೇಶಕ್ಕೆ ಸೇನೆ ಕಳುಹಿಸಿದೆ.

ವೆನೆಝುವೆಲದ ಸಂವಿಧಾನಕ್ಕೆ ಅನುಗುಣವಾಗಿ ಹಾಗೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸೇನಾ ಸಹಕಾರದ ಆಧಾರದಲ್ಲಿ ರಶ್ಯವು ವೆನೆಝುವೆಲಗೆ ಸೇನೆ ಕಳುಹಿಸಿದೆ ಎಂದು ರಶ್ಯ ವಿದೇಶ ಸಚಿವಾಲಯದ ವಕ್ತಾರೆ ಮರಿಯಾ ಝಖರೊವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೆನೆಝುವೆಲದ ಪ್ರತಿಪಕ್ಷ ನಾಯಕ ಜುವಾನ್ ಗ್ವಾಯಿಡೊ ತನ್ನನ್ನು ತಾನು ಮಧ್ಯಂತರ ಅಧ್ಯಕ್ಷ ಎಂಬುದಾಗಿ ಘೋಷಿಸಿದ ಬಳಿಕ, ಆ ದೇಶದ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News