ಬಾಹ್ಯಾಕಾಶದಲ್ಲಿ ದೇಶಗಳು ಶಾಂತಿ ಕಾಯ್ದುಕೊಳ್ಳಲಿ: ಚೀನಾ
Update: 2019-03-27 21:27 IST
ಬೀಜಿಂಗ್, ಮಾ. 27: ಭಾರತದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಗೆ ಚೀನಾ ಬುಧವಾರ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದೆ ಹಾಗೂ ಬಾಹ್ಯಾಕಾಶದಲ್ಲಿ ಎಲ್ಲ ದೇಶಗಳು ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.
ಚಲಿಸುತ್ತಿರುವ ಉಪಗ್ರಹವೊಂದನ್ನು ಹೊಡೆದುರುಳಿಸುವ ಮೂಲಕ ಭಾರತ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘‘ನಾವು ವರದಿಗಳನ್ನು ಗಮನಿಸಿದ್ದೇವೆ ಹಾಗೂ ಬಾಹ್ಯಾಕಾಶದಲ್ಲಿ ಪ್ರತಿಯೊಂದು ದೇಶವು ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುತ್ತವೆ ಎಂದು ನಾವು ಭಾವಿಸಿದ್ದೇವೆ’’ ಎಂಬುದಾಗಿ ಪಿಟಿಐ ಸುದ್ದಿ ಸಂಸ್ಥೆಯ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಚೀನಾ ವಿದೇಶ ಸಚಿವಾಲಯ ಹೇಳಿದೆ.