×
Ad

ಉಡುಪಿ: ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ರಾಜ್ಯಮಟ್ಟದ ಜನಾಂದೋಲನ

Update: 2019-03-27 21:47 IST

 ಉಡುಪಿ, ಮಾ. 27: ‘ಆರ್‌ಟಿಇ ಕಾಯ್ದೆ ಅನುಷ್ಠಾನ’ ಕುರಿತು ರಾಜ್ಯಮಟ್ಟದ ಜನಾಂದೋಲನದ ಅಂಗವಾಗಿ ಸಮಾವೇಶವೊಂದು ಮಾ.28ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಮಣಿಪಾಲ ಕೆಎಂಸಿಯ ಇಂಟರ್ಯಾಕ್ಟ್ ಬಿಲ್ಡಿಂಗ್‌ನ ಸಭಾಂಗಣದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯದ ಖ್ಯಾತ ಶಿಕ್ಷಣ ತಜ್ಞರಾದ ಡಾ. ನಿರಂಜನಾರಾಧ್ಯ ಇವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ರಾಜ್ಯ ವಿವಿಧ ಜಿಲ್ಲೆಗಳ ಪ್ರವರ್ತಕ ರೊಂದಿಗೆ ಸೇರಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿ ಸಾಧ್ಯತೆಗಳು ಮತ್ತು ಸವಾಲುಗಳ ಬಗ್ಗೆ ಚರ್ಚಿಸಲಾಗುತ್ತದೆ.

ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸೂಕ್ತ ಕ್ರಿಯಾ ಯೋಜನೆಗಳನ್ನು ರಚಿಸಿ, ಅನುಷ್ಠಾನಿಸುವುದರ ಜೊತೆಗೆ ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಮೂಲಕ ವಕಾಲತ್ತನ್ನು ನಡೆಸುವ ಉದ್ದೇಶ ವನ್ನು ಹೊಂದಲಾಗಿದೆ. ಪ್ರತೀ ಜಿಲ್ಲೆಯಲ್ಲೂ ಆರ್‌ಟಿಇ ಅನುಷ್ಠಾನಕ್ಕಾಗಿ ಜನಾಂದೋಲನ ವೇದಿಕೆಗಳು ಗಟ್ಟಿಯಾಗಿ ಮಕ್ಕಳಿಗೆ ಧ್ವನಿಯಾಗಬೇಕೆಂದು ರಾಜ್ಯದ 4 ವಿಭಾಗಗಳ 8ಜಿಲ್ಲೆಗಳ ಒಟ್ಟು 150 ಪ್ರತಿನಿಧಿಗಳು ಈ ಮಾವೇಶದಲ್ಲಿ ಪಾಲ್ಗೊಳ್ಳುತಿದ್ದಾರೆ.

ಕಾರ್ಯಕ್ರಮವನ್ನು ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಪರಿಕಲ್ಪನೆ ಯೋಜನೆಯಡಿ ಪಡಿ, ಮಂಗಳೂರು, ಸಮಾಜಕಾರ್ಯ ವಿಭಾಗ, ಪ್ರಸನ್ನ ಸ್ಕೂಲ್ ಆಪ್ ಪಬ್ಲ್ಲಿಕ್ ಹೆಲ್ತ್, ಮಾಹೆ ಮಣಿಪಾಲ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಮಣಿಪಾಲ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಲೀನಾ ಅಶೋಕ್ ಅಧ್ಯಕ್ಷತೆ ವಹಿಸಲಿರುವರು ಎಂದು ಮಂಗಳೂರು ಪಡಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News