×
Ad

ಉಡುಪಿ: ಲೋಕಸಭಾ ಚುನಾವಣೆಗೆ ಚುನಾವಣಾ ವೀಕ್ಷಕರ ನೇಮಕ

Update: 2019-03-27 21:56 IST

ಉಡುಪಿ, ಮಾ. 27: ಭಾರತ ಚುನಾವಣಾ ಆಯೋಗ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ, ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿ ಕೃಷ್ಣ ಕುನಾಲ್ (0820-2530080, 8277013878)ರನ್ನು ನೇಮಿಸಿದ್ದು, ಉಡುಪಿ ಪ್ರವಾಸಿ ಮಂದಿರದ ನೆಲ ಮಹಡಿಯ ವಿಐಪಿ ಸೂಟ್ ಸಿಯಲ್ಲಿ ಕಚೇರಿಯನ್ನು ತೆರೆಯಲಾಗಿದೆ.

ಪೊಲೀಸ್ ವೀಕ್ಷಕರಾಗಿ ಐಪಿಎಸ್ ಅಧಿಕಾರಿ ಸಂದೀಪ್ ಪ್ರಕಾಶ್ ಕಾರ್ಣಿಕ್ (ದೂರವಾಣಿ:0820-2530010, 8277013926)ರನ್ನು ನೇಮಿಸಿದ್ದು, ಉಡುಪಿ ಪ್ರವಾಸಿ ಮಂದಿರದ ನೆಲ ಮಹಡಿಯ ವಿಐಪಿ ಸೂಟ್ ಎಯಲ್ಲಿ ಕಚೇರಿಯನ್ನು ತೆರೆಯಲಾಗಿದೆ.

ವೆಚ್ಚ ವೀಕ್ಷಕರಾಗಿ ಐಆರ್‌ಎಸ್ ಮಲ್ಲಿಕಾರ್ಜುನ್ ಉತ್ತುರೆ (ದೂ.ಸಂಖ್ಯೆ: 0820-2530070, 8277013973)ರನ್ನು ನೇಮಿಸಿದ್ದು, ಉಡುಪಿ ಪ್ರವಾಸಿ ಮಂದಿರದ ನೆಲ ಮಹಡಿಯ ವಿಐಪಿ ಸೂಟ್ ಬಿಯಲ್ಲಿ ಕಚೇರಿಯನ್ನು ತೆರೆಯಲಾಗಿದೆ.

ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು/ ರಾಜಕೀಯ ಪಕ್ಷದವರು ಮೇಲ್ಕಂಡ ದೂರವಾಣಿ ಸಂಖ್ಯೆಗಳಿಗೆ ಅಥವಾ ಮೇಲ್ಕಂಡ ಚುನಾವಣಾ ವೀಕ್ಷಕರ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News