ವಿಶೇಷ ಚೇತನರಿಗೆ, ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ
Update: 2019-03-27 21:57 IST
ಉಡುಪಿ, ಮಾ. 27:ಲೋಕಸಭಾ ಚುನಾವಣೆ ಅಂಗವಾಗಿ ಉಡುಪಿ ನಗರಸಬಾ ವ್ಯಾಪಿತಿಯಲ್ಲಿ ವಿಶೇಷ ಚೇತನರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉಡುಪಿ ಬೀಡಿನಗುಡ್ಡೆ ಪರಿಸರದಲ್ಲಿ, ಜೋಡುಕಟ್ಟೆ ಪರಿಸರದಲ್ಲಿ, ಪರ್ಕಳ ಸಂತೆ ಮಾರ್ಕೆಟ್ ಪರಿಸರದಲ್ಲಿ ಮತ್ತು ಸಂತೆಕಟ್ಟೆ ಐಡಿಎಸ್‌ಎಂಟಿ ಕಟ್ಟಡದ ಬಳಿ ಹಮ್ಮಿಕೊಳ್ಳಲಾಗಿತ್ತು.
ನಗರ ಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್, ಕಂದಾಯ ಅಧಿಕಾರಿ ಧನಂಜಯ ಡಿ.ಬಿ,ಸಮುದಾಯ ಸಂಘಟನಾಧಿಕಾರಿ ನಾರಾಯಣ ಎಸ್.ಎಸ್, ಕಂದಾಯ ನಿರೀಕ್ಷಕರಾದ ಪಾಂಡುರಂಗ ಹಾಗೂ ನಗರ ಸಬೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.