×
Ad

ನಾಮಪತ್ರ ಪರಿಶೀಲನೆ: ಒಂದು ನಾಮಪತ್ರ ತಿರಸ್ಕೃತ; 14 ಕ್ರಮಬದ್ಧ

Update: 2019-03-27 22:46 IST

ಮಂಗಳೂರು, ಮಾ. 27: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಒಟ್ಟು 15 ಮಂದಿ 24 ನಾಮಪತ್ರ ಸಲ್ಲಿಸಿದ್ದು, ಬುಧವಾರ ನಡೆದ ಪರಿಶೀಲನೆ ವೇಳೆ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. 14 ನಾಮಪತ್ರ ಕ್ರಮಬದ್ಧವಾಗಿವೆ.

ಭಾರತೀಯ ಜನತಾ ಪಾರ್ಟಿಯಿಂದ ಸಲ್ಲಿಸಿದ್ದ ಸುದರ್ಶನ ಅವರ ಹೆಚ್ಚುವರಿ ನಾಮಪತ್ರ ತಿರಸ್ಕೃತಗೊಂಡಿದೆ. ನಾಮಪತ್ರ ಹಿಂದೆಗೆತಕ್ಕೆ ಮಾ.29ರ ಮಧ್ಯಾಹ್ನ ಮೂರು ಗಂಟೆ ತನಕ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಎಸ್. ಸೆಂಥಿಲ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಫಿದಾವಿತ್ ಸರಿಯಿಲ್ಲದ ಕಾರಣ ಅದನ್ನು ತಿರಸ್ಕಾರ ಮಾಡುವಂತೆ ಎರಡು ದೂರುಗಳು ಬಂದಿದ್ದವು. ದೂರುಗಳು ಸಣ್ಣ ಪುಟ್ಟದ್ದಾಗಿದ್ದು, ಅಭ್ಯರ್ಥಿ ಸ್ವತಃ ನೀಡುವ ಅಫಿದಾವಿತ್. ಹಾಗಾಗಿ ದೂರನ್ನು ತಿರಸ್ಕರಿಸಿ, ನಾಮಪತ್ರವನ್ನು ಕ್ರಮದ್ಧಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಕ್ರಮಬದ್ಧ ಹೆಸರುಗಳು:

ಹಿಂದುಸ್ತಾನ್ ಜನತಾ ಪಾರ್ಟಿ- ಸುಪ್ರೀಂ ಕುಮಾರ್ ಪೂಜಾರಿ, ಉತ್ತಮ್ ಪ್ರಜಾಕೀಯ ಪಾರ್ಟಿ- ವಿಜಯ್ ಶ್ರೀನಿವಾಸ್ ಸಿ., ಬಿಜೆಪಿ- ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್- ಮಿಥುನ್ ಎಂ.ರೈ, ಎಸ್‌ಡಿಪಿಐ- ಮುಹಮ್ಮದ್ ಇಲ್ಯಾಸ್, ಬಿಎಸ್ಪಿ- ಎಸ್.ಸತೀಶ್ ಸಾಲ್ಯಾನ್, ಪಕ್ಷೇತರರು- ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೊ, ಇಸ್ಮಾಯೀಲ್ ಶಾಫಿ, ಮುಹಮ್ಮದ್ ಖಾಲಿದ್, ಡೊಮೆನಿಕ್ ಅಲೆಕ್ಸಾಂಡರ್ ಡಿಸೋಜ, ವೆಂಕಟೇಶ ಬೆಂಡೆ, ಅಬ್ದುಲ್ ಹಮೀದ್, ಎಚ್.ಸುರೇಶ್ ಪೂಜಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News