ಪ್ರಧಾನಿಯ ಫೋಟೊ ಇರುವ ಟಿಕೆಟ್ ಗಳನ್ನು ಯಾಕೆ ಹಿಂಪಡೆದಿಲ್ಲ: ಸರಕಾರಕ್ಕೆ ಚು.ಆಯೋಗ ಪ್ರಶ್ನೆ

Update: 2019-03-27 17:31 GMT

ಹೊಸದಿಲ್ಲಿ, ಮಾ.27: ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್‌ಗಳನ್ನು ಇನ್ನೂ ಯಾಕೆ ವಾಪಸು ಪಡೆದಿಲ್ಲ ಎಂದು ಚುನಾವಣಾ ಆಯೋಗ (ಇಸಿ) ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ಅಲ್ಲದೆ ತನ್ನ ಸೂಚನೆಯನ್ನು ಇನ್ನೂ ಯಾಕೆ ಅನುಷ್ಟಾನಗೊಳಿಸಿಲ್ಲ ಎಂಬುದನ್ನು 3 ದಿನದೊಳಗೆ ವಿವರಿಸುವಂತೆ ರೈಲ್ವೇ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸೂಚಿಸಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಧಾನಿ ಮೋದಿಯ ಭಾವಚಿತ್ರವಿರುವ ವಿಮಾನ ಹಾಗೂ ರೈಲ್ವೇಯ ಟಿಕೆಟ್ ಹಾಗೂ ವಿಮಾನದ ಬೋರ್ಡಿಂಗ್ ಪಾಸ್ ವಾಪಾಸು ಪಡೆಯುವಂತೆ ಸೂಚಿಸಬೇಕೆಂದು ಕಾಂಗ್ರೆಸ್ ಪಕ್ಷ ಮಾರ್ಚ್ 15ರಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News