‘ಪಿಎಂ ನರೇಂದ್ರ ಮೋದಿ’ ನಿರ್ಮಾಪಕರಿಂದ ಪ್ರತಿಕ್ರಿಯೆ ಕೇಳಿದ ಆಯೋಗ

Update: 2019-03-27 17:34 GMT

 ಹೊಸದಿಲ್ಲಿ, ಮಾ.27: ಪ್ರಧಾನಿ ನರೇಂದ್ರ ಮೋದಿಯ ಜೀವನಚರಿತ್ರೆ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಸಿನೆಮಾದ ಬಿಡುಗಡೆಯನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಮುಂದೂಡಲು ಸೂಚಿಸಬೇಕೆಂದು ವಿಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ, ಈ ಕುರಿತು ಉತ್ತರಿಸುವಂತೆ ಸಿನೆಮಾದ ನಿರ್ಮಾಪಕರಿಗೆ ಚುನಾವಣಾ ಆಯೋಗ ಸೂಚಿಸಿದೆ.

ಈಗಾಗಲೇ ಈ ಕುರಿತು ಮಾರ್ಚ್ 20ರಂದು ಪೂರ್ವ ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ನಿರ್ಮಾಪಕರಿಗೆ ಹಾಗೂ ಸಿನೆಮಾದ ಜಾಹೀರಾತು ಪ್ರಕಟಿಸಿರುವ ಎರಡು ದಿನಪತ್ರಿಕೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅರ್ಜಿದಾರರು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದ ಕಾರಣ ಚುನಾವಣಾ ಆಯೋಗವೂ ನೋಟಿಸ್ ಜಾರಿಗೊಳಿಸಿದೆ. ಸಿನೆಮಾವು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಿಪಕ್ಷಗಳು ದೂರು ನೀಡಿವೆ. ಈ ಸಿನೆಮಾ ಎಪ್ರಿಲ್ 5ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News