ಮುರುಡೇಶ್ವರ ವಿದ್ಯಾರ್ಥಿಗಳ ಸಾಧನೆ : ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಬಾಂಬ್ ನಿಷ್ಕ್ರೀಯ ಯಂತ್ರ

Update: 2019-03-27 17:42 GMT

ಭಟ್ಕಳ: ಇತ್ತಿಚೆಗೆ ಕೊಡಗು ಜಿಲ್ಲಾ ಪೊನ್ನಂಪೇಟೆಯ ಕೂರ್ಗ ತಾಂತ್ರಿಕ ವಿದ್ಯಾಲಯದಲ್ಲಿ ಜರಗಿದ 2019 ರ ಪ್ರೊಜೆಕ್ಟ್ ಎಕ್ಸಿಬಿಷನ್ ಪ್ರತಿಭಾ ಅನ್ವೇಷಣಾ ಸ್ಪರ್ಧೆಯಲ್ಲಿ ಮುರುಡೇಶ್ವರ ಆರ್.ಎನ್.ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿದ್ಯುನ್ಮಾನ ಬಾಂಬ್ ನಿಷ್ಕ್ರೀಯ ಯಂತ್ರವು ರಾಜ್ಯ ಮಟ್ಟದಲ್ಲಿ ದ್ವಿತೀಯಾ ಸ್ಥಾನ ಪಡೆದುಕೊಂಡಿದೆ ಎಂದು ಆರ್.ಎನ್.ಎಸ್ ಸಂಸ್ಥೆಯ ಉಪಪ್ರಾಚಾರ್ಯ ಕೆ.ಮರಿಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾಂಬ್ ನಿಷ್ಕ್ರೀಯ ಯಂತ್ರದಲ್ಲಿ ಇಎಂಪಿ ತಂತ್ರಜ್ಞಾನ ಅಳವಡಿಸಿದ್ದರು ರಾತ್ರಿ ಸಮಯದಲ್ಲೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು ಅಂತರಜಾಲದ ಮೂಲಕ ಚಿತ್ರ ಸಹಿತ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಯಂತ್ರದ ಅನ್ವೇಷಣೆಯಲ್ಲಿ ಪಾಲಿಟೆಕ್ನಿಕ್ ನ  ಇಲೆಕ್ಟ್ರಾನಿಕ್ಸ್ ವಿಭಾಗದ 4ನೇ ಸೆಮಿಷ್ಟರ್ ವಿದ್ಯಾರ್ಥಿಗಳಾದ ಪ್ರಮತ್ ಬಿ.ನಾಯ್ಕ, ಮುನೀಶ್ ನಾಯ್ಕ, ಮ್ಯಾಕಾನಿಕಲ್ ವಿಭಾಗದ ಮುಹಮ್ಮದ್ ರಿಹಾನ್ ಮಲಿಕ್, ಸಾಗರ್ ಕೊಲ್ಲಾಪುರ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News