ಯಾನಗಳಲ್ಲಿ ವಿಶೇಷ ಊಟಕ್ಕೆ ಆದೇಶಿಸಬೇಡಿ

Update: 2019-03-27 17:42 GMT

ಹೊಸದಿಲ್ಲಿ,ಮಾ.27: ಊಟಕ್ಕೆ ಸಂಬಂಧಿಸಿದಂತೆ ಕಂಪನಿಯ ನಿಯಮಗಳನ್ನು ಪೈಲಟ್‌ಗಳು ಪಾಲಿಸಬೇಕಿರುವುದರಿಂದ ವಿಮಾನಯಾನಗಳ ಸಂದರ್ಭದಲ್ಲಿ ತಮಗಾಗಿ ವಿಶೇಷ ಊಟಕ್ಕೆ ಬೇಡಿಕೆ ಸಲ್ಲಿಸದಂತೆ ಏರ್ ಇಂಡಿಯಾ ತನ್ನ ಪೈಲಟ್‌ಗಳಿಗೆ ನಿರ್ದೇಶ ನೀಡಿದೆ.

ವಿಮಾನದ ಸಿಬ್ಬಂದಿ ವಿಶೇಷ ಊಟಗಳಿಗೆ ಆದೇಶಿಸುತ್ತಿರುವುದು ಗಮನಕ್ಕೆ ಬಂದಿದ್ದು,ಇದು ಸದ್ರಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಏರ್ ಇಂಡಿಯಾದ ಕಾರ್ಯಾಚರಣೆಗಳ ನಿರ್ದೇಶಕ ಅಮಿತಾಭ್ಸಿಂಗ್ ಅವರು ಬುಧವಾರ ಇ-ಮೇಲ್ ಸಂದೇಶವೊಂದರಲ್ಲಿ ಪೈಲಟ್‌ಗಳಿಗೆ ತಿಳಿಸಿದ್ದಾರೆ.

ವೈದ್ಯಕೀಯ ಕಾರಣಗಳಿಂದಾಗಿ ಮಾತ್ರ ಸಿಬ್ಬಂದಿಗಳು ವಿಶೇಷ ಊಟವನ್ನು,ಅಂದರೆ ವೈದ್ಯರು ಶಿಫಾರಸು ಮಾಡಿರುವ ಆಹಾರಕ್ಕಾಗಿ ಬೇಡಿಕೆಗಳನ್ನು ಸಲ್ಲಿಸಬಹುದು ಎಂದವರು ಹೇಳಿದ್ದಾರೆ.

ಪೈಲಟ್‌ಗಳು ಬರ್ಗರ್‌ಗಳು ಮತ್ತು ಸೂಪ್‌ಗಳಂತಹ ವಿಶೇಷ ಆಹಾರಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದು ಕಂಡು ಬಂದಿದೆ. ಇದು ಅಂತಿಮವಾಗಿ ಸಂಸ್ಥೆಯ ಆಹಾರ ವೆಚ್ಚಗಳನ್ನು ಹೆಚ್ಚಿಸುವ ಜೊತೆಗೆ ಆಹಾರ ವ್ಯವಸ್ಥೆೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಏರ್ ಇಂಡಿಯಾದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News