×
Ad

ಕಿವಿಯ ಸುರಕ್ಷತೆ ಕುರಿತು ಜನಜಾಗೃತಿ ಅಗತ್ಯ: ಡಾ.ಶ್ರೀರಾಮ ರಾವ್

Update: 2019-03-28 20:18 IST

ಉಡುಪಿ, ಮಾ. 28: ಕಿವಿಯು ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗ ವಾಗಿದ್ದು, ಜನ ಕಿವಿಯ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಆದುದರಿಂದ ಈ ಕುರಿತು ಜನ ಜಾಗೃತಿ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮರಾವ್ ಹೇಳಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾದ ವಿಶ್ವ ಶ್ರವಣ ದಿನಾಚರಣೆ ಮತ್ತು ಶ್ರವಣ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಪನ್ಮೂಲ ವ್ಯಕ್ತಿ ಉಡುಪಿ ಜಿಲ್ಲಾಸ್ಪತ್ರೆ ವಾಕ್ ಮತ್ತು ಶ್ರವಣ ತಜ್ಞೆ ಅಕ್ಷತಾ ಶ್ರವಣಾ ದೋಷ ಪತ್ತೆ ಹಚ್ಚುವಿಕೆ ಮತ್ತು ತಡೆಯುವಿಕೆಯ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರು ಪ್ರೊ.ಸೋಜನ್ ಕೆ.ಜಿ. ಶ್ರವಣದೋಷ ನಿವಾರಣೆ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಾಮರಾಯ ಆಚಾರ್ಯ ಸ್ವಾಗತಿಸಿ ದರು. ಶ್ರವಣದೋಷ ಮಕ್ಕಳ ಬೋಧಕಿ ಕಮಲ ಬಾಯಿ ವಂದಿಸಿದರು. ವಿದ್ಯಾರ್ಥಿನಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ನಂತರ ತಪಸಣಾ ಶಿಬಿರ ವನ್ನು ವಾಕ್ ಶ್ರವಣ ತಜ್ಞೆ ಅಕ್ಷತಾ, ಅಪೂರ್ವ, ಪ್ರತಿಾ ಕೆ.ಎಸ್, ವಿಜಯೇಶ್ವರಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News