×
Ad

ಉಡುಪಿ ಜಿಲ್ಲೆಯ 1250 ರೈತರಿಗೆ ಸಹಾಯಧನದಲ್ಲಿ ಗೋಬರ್ ಗ್ಯಾಸ್ ಘಟಕ: ಜಿಲ್ಲಾ ಭಾಕಿಸಂ

Update: 2019-03-28 20:26 IST

ಉಡುಪಿ, ಮಾ.28: ಉಡುಪಿ ಜಿಲ್ಲೆಯಲ್ಲಿ ಭಾರತೀಯ ಕಿಸಾನ್ ಸಂಘ, ಸಾವಯವ ಪರಿವಾರಗಳ ಒಕ್ಕೂಟ ಹಾಗೂ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ ಕೃಷಿಯೊಂದಿಗೆ ಹೈನುಗಾರಿಕೆ ನಡೆಸುವ ರೈತರಿಗೆ, ಗೋಬರ್ ಗ್ಯಾಸ್ ಘಟಕಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 750ಕ್ಕೂ ಹೆಚ್ಚು ರೈತರು ಇದಕ್ಕಾಗಿ ತಮ್ಮ ಹೆಸರನ್ನು ನೊಂದಾಯಿಸಿದ್ದು, ಒಟ್ಟು 1,250 ರೈತರಿಗೆ ಗೋಬರ್ ಗ್ಯಾಸ್ ಹೊಂದಲು ಅವಕಾಶವಿರುತ್ತದೆ. ಅಂದಾಜು ಸುಮಾರು ರೂ. 40,000 ಮೌಲ್ಯದ ಈ ಘಟಕಕ್ಕೆ ಶೇ.85ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಜೊತೆಗೆ 10 ವರ್ಷ ಗಳ ನಿರ್ವಹಣೆಯನ್ನೂ ನೋಡಿಕೊಳ್ಳಲಾಗುತ್ತದೆ.

ಜಿಲ್ಲೆಯ ಹೆಚ್ಚಿನ ರೈತರಿಗೆ ಇದರ ಲಾ ಸಿಗುವಂತಾಗಬೇಕು ಎಂಬ ನಿರೀಕ್ಷೆ ಯಲ್ಲಿ ಇದಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಭಾಕಿಸಂ ಸಭೆಯಲ್ಲಿ ಜಿಲ್ಲಾಧ್ಯಕ್ಷ ನವೀನ್‌ ಚಂದ್ರ ಜೈನ್ ನುಡಿದರು.

ಹೈನುಗಾರಿಕೆ ನಡೆಸುವ ರೈತರಿಗೆ ಗೋಬರ್ ಗ್ಯಾಸ್ ಘಟಕದಿಂದ ತುಂಬಾ ಪ್ರಯೋಜನವಿದೆ. ಗ್ಯಾಸ್ ಬಳಕೆಯಿಂದ ಸೌದೆ ಹಾಗೂ ಎಲ್‌ಪಿಜಿ ಗ್ಯಾಸ್‌ಗಳ ಬಳಕೆಯಲ್ಲಿ ಉಳಿತಾಯವಾಗುವುದಲ್ಲದೇ, ಗೊಬ್ಬರದಲ್ಲಿರುವ ಮಿಥೇನ್ ಅಂಶವನ್ನು ತೆಗೆದು ಬಳಸುವುದರಿಂದ ಉತ್ತಮ ಕಾಂಪೋಸ್ಟ್ ಆಗುತ್ತದೆ. ಸೆಗಣಿಯಲ್ಲಿರುವ ಮಿಥೇನ್ ಅಂಶವು ವಾತಾರಣಕ್ಕೆ ಸೇರಿ ಓರೆನ್ ಪದರಕ್ಕೆ ಮಾಡುವ ಹಾನಿ ಇದರಿಂದ ಕಡಿಮೆಯಾಗುತ್ತದೆ. ಪರಿಸರಕ್ಕೆ ಹಾಗೂ ಭೂಮಿಗೆ ಇದರಿಂದ ಸಹಾಯಕವಾಗುವುದರ ಜೊತೆಗೆ ರೈತರಿಗೂ ಆರ್ಥಿಕ ಉಳಿತಾಯ ವಾಗುತ್ತದೆ ಎಂದು ಜೈನ್ ನುಡಿದರು.

ಜಿಲ್ಲೆಯಲ್ಲಿ ಹೈನುಗಾರಿಕೆ ನಡೆಸುವ ಎಲ್ಲಾ ರೈತ ಕುಟುಂಬಗಳು ಗೋಬರ್ ಗ್ಯಾಸ್ ಘಟಕಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಈಗ ಬರುತ್ತಿರುವ ಘಟಕಗಳು ಸಿಂಟೆಕ್ಸ್ ಮಾದರಿಯವುಗಳಾಗಿರುವುದರಿಂದ ಅವುಗಳನ್ನು ಎಲ್ಲಿ ಬೇಕಾದರೂ ಇಡಬಹುದು ಹಾಗೂ ಅವುಗಳ ನಿರ್ಮಾಣಕ್ಕೆ ಹೆಚ್ಚಿನ ಸಮಸ್ಯೆ ಎದುರಾಗದು. ಅಲ್ಲದೇ ಘಟಕಗಳು ಹಾಳಾಗುವ ಸಮಸ್ಯೆಯಿರುವುದಿಲ್ಲ ಎಂದು ಸಭೆಯಲ್ಲಿ ಚರ್ಚೆಯ ವೇಳೆ ತಜ್ಞರು ನುಡಿದರು.

ಈವರೆಗೆ ಯಾವುದೇ ಸಂಸ್ಥೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಹಾಯಧನವನ್ನು ಗೋಬರ್ ಗ್ಯಾಸ್ ಘಟಕಕ್ಕೆ ನೀಡದಿರುವುದರಿಂದ, ಆಸಕ್ತ ರೈತರು ಜಿಲ್ಲೆಯ ಮೂರು ತಾಲೂಕಿನಲ್ಲಿರುವ ಭಾರತೀಯ ಕಿಸಾನ್ ಸಂಘದ ಕಚೇರಿಗಳಿಗೆ ಭೇಟಿ ಕೊಟ್ಟು, ಅರ್ಜಿ ಹಾಕಿಕೊಳ್ಳಬಹುದು ಎಂದು ಭಾಕಿಸಂ ಕರೆಕೊಟ್ಟಿದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಪ್ತಿ ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಪದಾಧಿಕಾರಿಗಳಾದ ರಾಮಚಂದ್ರ ಅಲ್ಸೆ ಬೆಳ್ವೆ, ಬಿ.ವಿ. ಪೂಜಾರಿ ಪೆರ್ಡೂರು, ಪಾಂಡುರಂಗ ಹೆಗ್ಡೆ ಕುತ್ಯಾರು, ಸುಂದರ ಶೆಟ್ಟಿ ಮುನಿಯಾಲು, ಆಸ್ತೀಕ ಶಾಸ್ತ್ರೀ ಗುಂಡ್ಮಿ, ವಿಶ್ವನಾಥ ಶೆಟ್ಟಿ ಕಾರ್ಕಳ, ಉಮಾನಾಥ ರಾನಡೆ ಮಾಳ, ಸೀತಾರಾಮ ಗಾಣಿಗ ಹಾಲಾಡಿ, ಪ್ರಾಣೇಶ್ ಯಡಿಯಾಳ್ ಯಡಮೊಗ್ಗೆ, ಗೋವಿಂದರಾಜ್ ಭಟ್ ಕಡ್ತಲ ಮುಂತಾದವರು ಉಪಸ್ಥತರಿದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News