ಇಂದ್ರಾಳಿ ಹಾಡಿಯಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ
Update: 2019-03-28 20:29 IST
ಮಣಿಪಾಲ, ಮಾ. 28: ಇಂದ್ರಾಳಿ ಸುಝುಕಿ ಶೋರೂಂ ಎದುರಿನ ಹಾಡಿ ಯಲ್ಲಿ ಅಪರಿಚಿತ ಯುವಕನೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮಾ. 27ರ ಸಂಜೆ 7ಗಂಟೆಯಿಂದ ಮಾ.28ರ ಮಧ್ಯಾಹ್ನ 3ಗಂಟೆಯ ಮಧ್ಯಾ ವಧಿಯಲ್ಲಿ 30ರಿಂದ 35ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸ ಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.