ಚೀನಾ ಸೇನೆಗಲ್ಲ, ಅಮೆರಿಕಕ್ಕೆ ಸುಂದರ್ ಪಿಚೈ ಬದ್ಧ: ಟ್ರಂಪ್

Update: 2019-03-28 15:16 GMT

ವಾಶಿಂಗ್ಟನ್, ಮಾ. 28: ತಂತ್ರಜ್ಞಾನ ಸಂಸ್ಥೆ ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈ, ಸಂಪೂರ್ಣವಾಗಿ ಅಮೆರಿಕದ ಭದ್ರತೆಗೆ ಕಟಿಬದ್ಧರಾಗಿದ್ದಾರೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಈ ಹಿಂದೆ, ಗೂಗಲ್ ಸಿಇಒ ಚೀನಾ ಸೇನೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದಾಗಿ ಟ್ರಂಪ್ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಈಗಷ್ಟೇ ಗೂಗಲ್ ಅಧ್ಯಕ್ಷ ಸುಂದರ ಪಿಚೈ ಅವರನ್ನು ಭೇಟಿಯಾದೆ. ಅವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ’’ ಎಂಬುದಾಗಿ ಶ್ವೇತಭವನದಲ್ಲಿ ಪಿಚೈ ಅವರನ್ನು ಭೇಟಿಯಾದ ಬಳಿಕ ಟ್ರಂಪ್ ಟ್ವೀಟ್ ಮಾಡಿದರು.

ಚೀನಾದಲ್ಲಿ ಗೂಗಲ್‌ನ ವ್ಯಾಪಾರ ಚಟುವಟಿಕೆಗಳು ಚೀನಾ ಮತ್ತು ಅದರ ಸೇನೆಗೆ ಸಹಾಯ ಮಾಡುತ್ತಿವೆ ಎಂಬುದಾಗಿ ಟ್ರಂಪ್ ಈ ತಿಂಗಳ ಆದಿ ಭಾಗದಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News