×
Ad

ಚುನಾವಣಾ ಕರ್ತವ್ಯಕ್ಕೆ ಅಡ್ಡಿ: ದೂರು

Update: 2019-03-28 22:31 IST

ಬ್ರಹ್ಮಾವರ, ಮಾ. 28: ಸಾಬರಕಟ್ಟೆಯಲ್ಲಿರುವ ಬಾರೊಂದಕ್ಕೆ ದಾಳಿ ನಡೆಸಿದ ಚುನಾವಣಾ ಫ್ಲೈಯಿಂಗ್ ಸ್ಕಾಡ್‌ನ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಉಡುಪಿ ಜಿಲ್ಲಾ ಬಾರ್ ಅಶೋಸಿಯೇಶನ್ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ವಿರುದ್ದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೈಯಿಂಗ್ ಸ್ಕಾಡ್‌ನ ಮಧು ಎನ್.ಎಂ. ಎಂಬವರು ಮಾ.26ರಂದು ರಾತ್ರಿ ರಶೀದಿ ರಹಿತವಾಗಿ ಮಧ್ಯಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಸಾಬರಕಟ್ಟೆಯ ಸ್ವಾಗತ್ ಬಾರ್‌ಗೆ ದಾಳಿ ನಡೆಸಿದರು. ಈ ವೇಳೆ ಬಾರ್ ಮಾಲಕ ಅಶೋಕ ಪ್ರಭು ಎಂಬವರು ಗೋವಿಂದರಾಜ್‌ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದರು.

ಅಲ್ಲಿಗೆ ಬಂದ ಗೋವಿಂದರಾಜ್ ಹೆಗ್ಡೆ, ನಿಮಗೆ ವಿಚಾರಣೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಹೇಳಿ ಮಧು ಅವರನ್ನು ಜೋರಾಗಿ ಹೊರ ದಬ್ಬುವ ರೀತಿ ವರ್ತಿಸಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News