×
Ad

ಐಪಿಎಲ್ ಬೆಟ್ಟಿಂಗ್: ಮತ್ತೆ ಎಚ್ಚರಿಕೆ ನೀಡಿದ ಕಮಿಷನರ್

Update: 2019-03-28 22:45 IST

ಮಂಗಳೂರು, ಮಾ.28: ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡವು ಗುರುವಾರ ಹಾಕಿದ ಟ್ವೀಟ್‌ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರೀ ಟ್ವೀಟ್ ಮಾಡಿ, ಐಪಿಎಲ್ ಬೆಟ್ಟಿಂಗ್‌ ದಾರರಿಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಆರ್‌ಸಿಬಿ ತಂಡ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗಾಗಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಈ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಆರ್‌ಸಿಬಿ ತಂಡ ಟ್ವೀಟ್ ಮೂಲಕ ಪ್ರಚುರಪಡಿಸಿದೆ. ಈ ಟ್ವೀಟ್‌ಗೆ ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ರೀ ಟ್ವೀಟ್ ಮಾಡಿ ಐಪಿಎಲ್ ಬೆಟ್ಟಿಂಗ್ ದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಮಾ.22ರಂದು ಬೆಟ್ಟಿಂಗ್‌ನಲ್ಲಿ ತೊಡಗದಂತೆ ಕಮಿಷನರ್ ಎಚ್ಚರಿಕೆ ನೀಡಿದ್ದರು. ಈಗ ಮತ್ತೆ ಟ್ವೀಟ್ ಮಾಡಿ ಆರ್‌ಸಿಬಿಗೆ ಟ್ಯಾಗ್ ಮಾಡಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಮಾ.26ರಂದು ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಲಾಗಿತ್ತು. ಟ್ವೀಟ್ ಮೂಲಕ ಹಲವಾರು ವಿಚಾರ ಗಳನ್ನು ಮಂಗಳೂರು ಕಮಿಷನರ್ ಹಂಚಿಕೊಳ್ಳುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News