×
Ad

ಮಾ. 29: ‘ಮೇಲ್ತೆನೆ ಇ-ಮ್ಯಾಗಝಿನ್’ ಬಿಡುಗಡೆ

Update: 2019-03-28 22:48 IST

ಮಂಗಳೂರು, ಮಾ.28: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಪ್ರಕಟಗೊಳ್ಳುವ ‘ಮೇಲ್ತೆನೆ ಇ-ಮ್ಯಾಗಝಿನ್’ ಬಿಡುಗಡೆ ಕಾರ್ಯಕ್ರಮವು ಮಾ.29ರಂದು ಅಪರಾಹ್ನ 2:30ಕ್ಕೆ ಮಂಗಳೂರು ವಿವಿಯ ಸ್ಟಾಟಿಸ್ಟಿಕ್ಸ್ ಲೆಕ್ಟರ್ ಹಾಲ್‌ನಲ್ಲಿ ಜರುಗಲಿದೆ.

ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅಧ್ಯಕ್ಷತೆ ವಹಿಸಿ ‘ಮೇಲ್ತೆನೆ ಇ-ಮ್ಯಾಗಝಿನ್’ ಬಿಡುಗಡೆ ಮಾಡಲಿದ್ದಾರೆ.

ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಮತ್ತು ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಬಿ. ಇಸ್ಮಾಯೀಲ್ ಭಾಗವಹಿಸಲಿದ್ದಾರೆ ಎಂದು ‘ಮೇಲ್ತೆನೆ ಇ-ಮ್ಯಾಗಝಿನ್’ನ ಸಂಪಾದಕ ಇಸ್ಮತ್ ಪಜೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News