×
Ad

​ವಿಶ್ವವಿದ್ಯಾನಿಲಯ ಕಾಲೇಜಿಗೆ ಬಯಲು ರಂಗ ಮಂದಿರ ಕೊಡುಗೆ -ಮಹಾಬಲೇಶ್ವರ ಎಂ.ಎಸ್‌

Update: 2019-03-28 23:09 IST

ಮಂಗಳೂರು, ಮಾ.28: ನಗರದ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ಬಲು ರಂಗಮಂದಿರವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಲು ತೀರ್ಮಾನಿಸಿದೆ ಎಂದು ಬ್ಯಾಂಕಿನ ಎಂ.ಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.

ನಗರದ ಹಂಪನಕಟ್ಟೆಯ ಬಳಿಯ ವಿಶ್ವ ವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಅವರು ಇಂದು ಕರ್ಣಾಟಕ ಬ್ಯಾಂಕ್ ರಂಗ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.

150 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ವಿದ್ಯಾನಿಲಯ ಕಾಲೇಜು ನಮ್ಮ ನಡುವೆ ಉತ್ತಮವಾಗಿ ಕಾರ್ಯಹಿಸುತ್ತಾ ಇರುವುದು ಒಂದು ಹೆಮ್ಮೆಯ ಸಂಕೇತವಾಗಿದೆ .ಕರ್ಣಾಟಕ ಬ್ಯಾಂಕ್‌ನ ಸಂಸ್ಥಾಪಕಾರದ ಸೂರ್ಯನಾರಾಯಣ ಅಡಿಗರವರು ಮಂಗಳೂರು ವಿಶ್ವ ವಿದ್ಯಾನಿಲಯದ ಸ್ಥಾಪನೆಗೆ ಶ್ರಮಿಸಿದ ಮಹನೀಯರಲ್ಲಿ ಪ್ರಮುಖರಾಗಿದ್ದರು.ಕರ್ನಾಟಕ ಬ್ಯಾಂಕಿನ ಮೂರು ಅಧ್ಯಕ್ಷರು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯ ಸಾಕಷ್ಟು ಹಳೆ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಹಲವು ಸೇವೆಗಳನ್ನು ಸಲ್ಲಿಸುತ್ತಾ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಾ ಬಂದಿದೆ. ಇಂತಹ ಪರಂಪರೆಯನ್ನು ಹೊಂದಿರುವ ಸಂಸ್ಥೆಗೆ ಬಯಲು ರಂಗ ಮಂದಿರವನ್ನು ನಿರ್ಮಿಸಿ ಕೊಡುವ ಮೂಲಕ ಬ್ಯಾಂಕ್ ಕೊಡುಗೆ ನೀಡಲು ನಿರ್ಧರಿಸಿದೆ ಎಂದು ಮಹಾಬಲೇಶ್ವರ ತಿಳಿಸಿದ್ದಾರೆ.

ಸಮಾಜದಲ್ಲಿ ಇತರರಿಗೆ ಸಹಾಯ ಮಾಡುವುದು ನಮ್ಮ ಹೊಣೆಗಾರಿಕೆ ಇನ್ನೊಬ್ಬರಿಗೆ ನೆರವು ನೀಡುತ್ತಾ ಬದುಕುವುದು ನಿಜವಾದ ಬದುಕಿನ ಧರ್ಮ. ವಿದ್ಯಾರ್ಥಿಗಳ ಹೆತ್ತವರು ಹಲವು ಆಸೆ ಆಕಾಂಕ್ಷೆಗಳೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.ವಿದ್ಯಾರ್ತಿಗಳು ಇದನ್ನು ಅರಿತು ತಮ್ಮ ಬದುಕಿನಲ್ಲಿ ಉತ್ತಮ ಗುರಿಯೊಂದಿಗೆ ಸಾಗಬೇಕು.ಒಳ್ಳೆಯ ಕೆಲಸ ಮಾಡಲು ದಿನ ಮುಂದೂಡಬಾರದು ಎಂದು ಮಹಾಬಲೇಶ್ವರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಪತಿ ಕಿ ಶೋರಿ ನಾಯಕ್ ಅಧ್ಯಕ್ಷೆ ವಹಿಸಿ ಶುಭ ಹಾರೈಸಿದರು.ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಣ್ಣ ನಾಯ್ಕಾ ,ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ,ಕರ್ಣಾಟಕ ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News