ಬಿಜೆಪಿಗೆ 200ಕ್ಕಿಂತ ಹೆಚ್ಚು ಸ್ಥಾನ ಸಿಗದು: ಮಮತಾ ಬ್ಯಾನರ್ಜಿ

Update: 2019-03-28 18:24 GMT

ಕೋಲ್ಕತಾ, ಮಾ. 28: ರಾಜಕೀಯ ವಲಯದ ಒಳಗಿನ ಸ್ವಘೋಷಿತ ಮತ-ಪಂಡಿತರು ಕಳುಹಿಸಿರುವ ವ್ಯಾಟ್ಸ್ ಆ್ಯಪ್‌ನ ಅನಾಮಿಕ ಪೋಸ್ಟ್ ಉಲ್ಲಖಿಸಿರುವ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

 ಕೋಲ್ಕತ್ತಾದಲ್ಲಿ ಬುಧವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ ಬ್ಯಾನರ್ಜಿ, ದೇಶದ ವಿವಿಧ ಭಾಗಗಳ ಮತದಾರರ ಮನಸ್ಥಿತಿಯ ಗ್ರಹಿಕೆಯ ಆಧಾರದಲ್ಲಿ ಈ ಲೆಕ್ಕಾಚಾರ ಮಾಡಲಾಗಿದೆ ಎಂದರು. ‘‘ದೇಶದ ರಾಜಕೀಯ ಅಭಿವೃದ್ಧಿಗಳನ್ನು ಸನಿಹದಿಂದ ಗಮನಿಸುತ್ತಿರುವ ಬುದ್ಧಿವಂತ ಜನರು ಈ ಅಂಕಿ-ಅಂಶಗಳನ್ನು ರೂಪಿಸಿದ್ದಾರೆ. ನಾನಲ್ಲ’’ ಎಂದು ಅವರು ಹೇಳಿದ್ದಾರೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಒಡಿಶ್ಶಾ ಹಾಗೂ ಪಶ್ಚಿಮ ಬಂಗಾಳದ ಒಟ್ಟು 193 ಸ್ಥಾನಗಳಲ್ಲಿ 5ರಿಂದ 10 ಸ್ಥಾನಗಳನ್ನು ಪಡೆಯಲು ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News