×
Ad

ರಾಜಕೀಯ ಪ್ರೇರಿತ ದಾಳಿ: ಜೆಡಿಎಸ್ ಖಂಡನೆ

Update: 2019-03-29 17:48 IST

ಮಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯದಲ್ಲಿ ನಿರ್ಧಿಷ್ಟ ರಾಜಕೀಯ ಪಕ್ಷದ ಮುಖಂಡರು, ಅವರ ಬೆಂಬಲಿಗರು ಉದ್ಯಮಿಗಳ ಮೇಲೆ ದಾಳಿ ನಡೆಸಿರುವುದು ಖಂಡನೀಯ.  ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಇವರ ಹತಾಶ ಮನೋ ಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಜೆಡಿಎಸ್ ಜಿಲ್ಲಾ ಮುಖಂಡರು ತಿಳಿಸಿದ್ದಾರೆ.

ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣಾ ಅಭ್ಯರ್ಥಿಗಳ ಮನೋಸ್ಥೆರ್ಯವನ್ನು ಅಭದ್ರಗೊಳಿಸಲು ಈ ತಂತ್ರ ರೂಪಿಸಿದ್ದು ಇದಕ್ಕೆ ಈ ರಾಜ್ಯದ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಕರಾವಳಿಯ ಪ್ರತಿಷ್ಟಿತ ವಿಜಯ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡದೊಡನೆ ಎ. 1ರಂದು ವಿಲೀನಗೊಳ್ಳುತ್ತಿದ್ದು, ಈ ಜಿಲ್ಲೆಗೆ ಕೇಂದ್ರ ಸರಕಾರವು ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಮುಖಾಂತರ ಕರಾಳ ಕೊಡುಗೆಯನ್ನು ನೀಡಲಿದ್ದಾರೆ.  ಅವರ ಈ ಕೊಡುಗೆಗೆ ಎ. 18ರಂದು ನಮ್ಮ ಜಿಲ್ಲೆಯ ಬುದ್ಧಿವಂತ ಮತದಾರರು ಯುವ ಮುಂದಾಳು ಮಿಥುನ್ ರೈ ಗೆ ಮತದಾನ ಮಾಡಿ ಸಂಸದರಾಗಿ ಅಯ್ಕೆ ಮಾಡಿ ಈ ಜಿಲ್ಲೆಗೆ ಬಂಪರ್ ಕೊಡುಗೆಯನ್ನು ನೀಡಲಿದ್ದಾರೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಅಪದ್ಬಾಂಧವರಾಗಿ 24 ಘಂಟೆಗಳ ಸೇವಾ ಮನೋಬಾವದ “ಯುವಪಡೆ”ಗಳನ್ನು ರಚಿಸುವ ಚಿಂತನೆಯನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈ ಗೊಳ್ಳಲಾಗುವುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಹಾಗು ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News