×
Ad

ಮಾ. 30: ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಕ್ಯಾಂಪಸ್ ಕೊಲೊಕ್ವಿಯಂ ಕ್ಯಾಂಪ್

Update: 2019-03-29 17:49 IST

ಕೊಣಾಜೆ: ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಕ್ಯಾಂಪಸ್ ವತಿಯಿಂದ ಕ್ಯಾಂಪಸ್ ಕೊಲೊಕ್ವಿಯಂ ಕ್ಯಾಂಪ್  ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಕ್ಯಾಂಪಸ್ ಚಯರ್ ಮ್ಯಾನ್ ಇಬ್ರಾಹೀಂ ಅಹ್ಸನಿ ಮಂಜನಾಡಿ ಅಧ್ಯಕ್ಷತೆಯಲ್ಲಿ ಮಾ. 30ರ ಮಧ್ಯಾಹ್ನ 2 ಗಂಟೆಗೆ ತಿಬ್ಲೆಪದವು ಮದ್ರಸ ಹಾಲ್‌ನಲ್ಲಿ ನಡೆಯಲಿದೆ. 

ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರಾದ ಮುಸ್ತಫ ಮಾಸ್ಟರ್ ಮುಕ್ಕಚೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಮುಡಿಪು ಡಿವಿಶನ್ ಅಧ್ಯಕ್ಷ ತೌಸೀಫ್ ಸಅದಿ ಹರೇಕಳ, ಮುಡಿಪು ಡಿವಿಶನ್ ಟ್ರೈನಿಂಗ್ ಮತ್ತು ಇವೆಂಟ್ಸ್ ಕನ್ವೀನರ್ ಮನ್ಸೂರ್ ಹಿಮಮಿ ಮೊಂಟೆಪದವು, ಇಬ್ರಾಹೀಂ ಅಹ್ಸನಿ ಮಂಜನಾಡಿ ವಿಷಯ ಮಂಡಿಸಲಿದ್ದಾರೆ ಎಂದು ಮುಡಿಪು ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಅಬೂಸ್ವಾಲಿಹ್ ಹರೇಕಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News