×
Ad

ನ್ಯಾಯಸಮ್ಮತ ಚುನಾವಣೆಗಾಗಿ ಪೊಲೀಸರಿಂದ ಪಥಸಂಚಲನ

Update: 2019-03-29 20:27 IST

ಭಟ್ಕಳ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪೊಲೀಸ್ ಇಲಾಖೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವ ಕುರಿತು ಜನತೆಗೆ ಖಾತ್ರಿ ಪಡಿಸಲು ತಾಲೂಕಿನ ವಿವಿದೆಡೆಗಳಲ್ಲಿ ಪಥ ಸಂಚಲನ ನಡೆಸಿದೆ.

ತಾಲೂಕಿನ ಜಾಲಿ ರಸ್ತೆಯಿಂದ ಆರಂಭವಾದ ಪಥ ಸಂಚಲನವು ಆಝಾದ್ ನಗರ 1ನೇ ಕ್ರಾಸ್ ತನಕ ತಲುಪಿ ಅಲ್ಲಿಂದ ಮತ್ತೆ ವಾಪಾಸಾಯಿತು. ನಂತರ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಯಿತು.

ಪಥ ಸಂಚಲನದಲ್ಲಿ ಡಿ.ವೈ.ಎಸ್.ಪಿ. ವೆಲೈಂಟನ್ ಡಿಸೋಜ, ಸಿ.ಪಿ.ಐ. ಕೆ.ಎಲ್.ಗಣೇಶ, ಸಬ್ ಇನ್ಸ್ ಪೆಕ್ಟರ್ ಕುಸುಮಾಧರ ಸೇರಿದಂತೆ ಇತರ ಸಬ್ ಇನ್ಸ್ ಪೆಕ್ಟರ್ ಗಳು, ಎ.ಎಸ್.ಐ., ಹಾಗೂ ಕೆ.ಎಸ್.ಆರ್.ಪಿ., ಜಿಲ್ಲಾ ಮೀಸಲು ಪಡೆ, ಸಿವಿಲ್ ಪೊಲೀಸ್ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News