ಶೋಭಾ ಕರಂದ್ಲಾಜೆಗೆ ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ: ಪ್ರಮೋದ್ ಮಧ್ವರಾಜ್

Update: 2019-03-29 15:06 GMT

ಪಡುಬಿದ್ರಿ: ನಾನು ಈ ಮಣ್ಣನಲ್ಲಿ ಹುಟ್ಟಿದವನು. ಎಲ್ಲಿಂದಲೋ ಬಂದು ಸಂಸದರಾಗಿ ಆ ಬಳಿಕ ನಾಪತ್ತೆಯಾದ ಶೋಭಾರಿಗೆ ಈ ಕ್ಷೇತ್ರದ ಬಗ್ಗೆ ಕಾಳಜಿ ಇರಲಿಲ್ಲ. ಮರಳು ಸಮಸ್ಯೆಗೆ ಶೋಭಾ ಕರಂದ್ಲಾಜೆ ನೇರ ಕಾರಣ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಪ್ರಮೋದ್‍ ಮಧ್ವರಾಜ್  ಆರೋಪಿಸಿದ್ದಾರೆ.

ಕಾಪುವಿನ ರಾಜೀವ ಭವನದಲ್ಲಿ ಗುರುವಾರ ಸಂಜೆ ನಡೆದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದ ಪರಿಸರ ನೀತಿಯಿಂದ ಇವತ್ತು ಮರಳುಗಾರಿಕೆಗೆ ನಿಷೇಧವಾಗಿದೆ.  ಈ ನಿಯಮವನ್ನು ಸಡಿಲಗೊಳಿಸುವುದು ಮಾರ್ಪಾಟು ಮಾಡುವವುದು ಸಂಸದ ರಾಗದವರು ಕೇಂದ್ರಕ್ಕೆ ಒತ್ತಡ ಹೇರಬೇಕಿತ್ತು. ಇದರಲ್ಲಿ ಶೋಭಾ ಕರಂದ್ಲಾಜೆ ವಿಫಲರಾಗಿದ್ದರು. ಈಗ ನಮ್ಮ ಮೇಲೆ ಗೂಭೆ ಕೂರಿಸುತಿದ್ದಾರೆ. ನಾನು ಶಾಸಕನಾಗಿರುವ ಸಂದರ್ಭದಲ್ಲಿ 9ಲಕ್ಷ ಟನ್ ಪರ್ಮಿಟ್ ಮಾಡಿಸಿದ್ದೆ. ಇದರಿಂದ ಆ ದಿನ 6ಲಕ್ಷ ಟನ್ ಮರಳು ತೆಗೆಯಲಾಗುತಿತ್ತು. 167 ಜನರಿಗೆ ಪರ್ಮೀಟ್ ನೀಡಲಾಗಿತ್ತು. ಆದರೆ ಸದ್ಯ 15 ಸಾವಿರ ಟನ್ ಮಾತ್ರ 7 ಬ್ಲಾಕ್‍ಗಳಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಕಾರಣವಾಗಿದೆ ಎಂದು ದೂರಿದರು.

ನಾವು ಕೋಟಿ ಚೆನ್ನಯರಂತೆ: ವಿನಯಕುಮಾರ್ ಸೊರಕೆ ಮತ್ತು ನಾನು ಕೋಟಿ ಚೆನ್ನಯರಂತೆ. ನಾನು ಮತ್ತು ಅವರು ಶಾಸಕರಾಗಿದ್ದಾಗ ಅತೀ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆವು ಎಂದು ಹೇಳಿದರು. 

ನಾನು ರಾಜಕೀಯದಲ್ಲಿ ಈ ರೀತಿ ಬರುತ್ತದೆ ಎಂದು ಎಣಿಸಿರಲಿಲ್ಲ. ಕಾಂಗ್ರೆಸ್ ಆಕಾಂಕ್ಷಿಯಾಗಿ ಹೈಕಮಾಂಡಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ನನಗಿಂತ ಸಮರ್ಥರಿದ್ದರೆ ಅವರಿಗೆ ಟಿಕೆಟ್ ನೀಡಿ ಎಂದು ತಿಳಿಸಿದ್ದೆ. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‍ನ ಕಾರ್ಯಕರ್ತನಾಗಿ ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರ ಕರೆಯಂತೆ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತಿದ್ದೇನೆ ಎಂದರು. 

ನನಗೂ ಕರೆ ಮಾಡಿದ್ದರು: ಪ್ರಮೋದ್ ಮಧ್ವರಾಜ್ ಮಾತನಾಡಿ ನನಗೆ ಕುಮಾರ ಸ್ವಾಮಿ ಅವರು ಕರೆ ಮಾಡಿ ಜೆಡಿಎಸ್ ಪಕ್ಷದಲ್ಲಿ ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ಹೈಕಮಾಂಡ್ ಒಪ್ಪಿಗೆಯಂತೆ ಚುನಾವಣೆಗೆ ಸ್ಪರ್ಧಿಸುತಿದ್ದೇನೆ ಎಂದರು. 

ಆ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಮಾತನಾಡಿ ನನಗೂ ಕುಮಾರ ಸ್ವಾಮಿ ಅವರು ಕರೆ ಮಾಡಿದ್ದರು. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದೆ ಎಂದು ಪ್ರಮೋದ್ ಹೇಳಿಕೆಗೆ ನಯವಾಗಿಯೇ ತಿರುಗೇಟು ನೀಡಿದರು. 

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನವೀನ್‍ಚಂದ್ರ ಜೆ.ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಎಂ.ಎ. ಗಫೂರ್, ಕಲ್ಲೆಗಾ ತಾರನಥಾ ಶೆಟ್ಟಿ, ರಾಜಶೇಖರ ಕೋಟ್ಯಾನ್, ಶಾಲಿನಿ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News