ಉಡುಪಿ: ಎ.2ಕ್ಕೆ ಸಹಕಾರಿ ಸಮಾವೇಶ
Update: 2019-03-29 22:06 IST
ಉಡುಪಿ, ಮಾ. 29: ಸಹಕಾರ ಭಾರತಿ ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲೆಯ ಎಲ್ಲಾ ಸಹಕಾರಿಗಳನ್ನೊಳಗೊಂಡ ‘ಸಹಕಾರಿ ಸಮಾವೇಶ’ವನ್ನು ಎ.2ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕಿನ್ನಿಮುಲ್ಕಿಯಲ್ಲಿರುವ ವೀರಭದ್ರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ವ್ಯವಸಾಯ ಸೇವಾ ಸಹಕಾರಿಗಳು, ಮೀನುಗಾರರ ಸಹಕಾರಿಗಳು, ಸಂಘಗಳು, ಸೌಹಾರ್ದ ಸಹಕಾರಿಗಳು, ಕ್ರೆಡಿಟ್ ಸಹಕಾರಿ ಸಂಘಗಳು, ಹಾಲು ಉತ್ಪಾದಕ ಸಹಕಾರಿಗಳು ಹಾಗೂ ಆಸಕ್ತ ಸಹಕಾರಿ ಬಾಂಧವರು ಭಾಗವಹಿಸಬೇಕೆಂದು ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.