ಮತ ಎಣಿಕಾ ಕೇಂದ್ರಕ್ಕೆ ಚುನಾವಣಾ ವೀಕ್ಷಕರ ಭೇಟಿ
Update: 2019-03-29 22:13 IST
ಉಡುಪಿ, ಮಾ. 29: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವಾದ ಉಡುಪಿಯ ಸೈಂಟ್ ಸಿಸಿಲಿ ಹೈಸ್ಕೂಲ್‌ಗೆ, ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ ಕೃಷ್ಣ ಕುನಾಲ್ ಹಾಗೂ ಪೊಲೀಸ್ ವೀಕ್ಷಕ ಸಂದೀಪ್ ಪ್ರಕಾಶ್ ಕಾರ್ಣಿಕ್ ಗುರುವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಮತ್ತು ಉಡುಪಿ ಎಸ್ಪಿನಿಶಾ ಜೇಮ್ಸ್ ಈ ಸಂದರ್ದಲ್ಲಿ ಉಪಸ್ಥಿತರಿದ್ದರು.
ಮತಯಂತ್ರಗಳನ್ನು ಇಡುವ ಭದ್ರತಾ ಕೊಠಡಿ ಪರಿಶೀಲಿಸಿದ ವೀಕ್ಷಕರು ಎಲ್ಲಾ ಅಗತ್ಯ ಸುರಕ್ಷಾ ಮತ್ತು ದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.