×
Ad

ಕಾರ್ಕಳ: ನ್ಯಾಯಾಲಯಗಳ ಸ್ಥಳಾಂತರ

Update: 2019-03-29 22:16 IST

ಉಡುಪಿ, ಮಾ. 29: ಕಾರ್ಕಳದಲ್ಲಿ ನೂತನ ನ್ಯಾಯಾಲಯ ಕಟ್ಟಡ ಸಂಕೀರ್ಣ ನಿರ್ಮಾಣ ಹಿನ್ನೆಲೆಯಲ್ಲಿ ಹಾಲಿ ಇರುವ ನ್ಯಾಯಾಲಯಗಳನ್ನು ಎ.1ರಿಂದ ಈ ಕೆಳಗಿನಂತೆ ಸ್ಥಳಾಂತರಿಸಲಾಗಿದೆ.

ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಂ ನ್ಯಾಯಾಲಯವನ್ನು 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ವಸತಿ ಗೃಹ (ಕಾರ್ಕಳ ಪೊಲೀಸ್ ಸ್ಟೇಶನ್ ಪಕ್ಕದಲ್ಲಿ) ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರ ವಸತಿಗೃಹ (ಅಗ್ನಿಶಾಮಕ ಠಾಣೆ ಪಕ್ಕದಲ್ಲಿ) ಇಲ್ಲಿಗೆ ಸ್ಥಳಾಂತರಿಸಲಾಗಿದೆ.

ಕಾರ್ಕಳ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವನ್ನು ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರ ವಸತಿಗೃಹ (ಅಗ್ನಿಶಾಮಕ ಠಾಣೆ ಪಕ್ಕದಲ್ಲಿ) ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಕಾರ್ಕಳ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರ ವಸತಿ ಗೃಹ (ಅಗ್ನಿಶಾಮಕ ಠಾಣೆ ಪಕ್ಕದಲ್ಲಿ) ಇಲ್ಲಿಗೆ ಸ್ಥಳಾಂತರಿಸಲಾಗಿದೆ.

ನೂತನ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಈ ಸ್ಥಳಾಂತರ ಜಾರಿಯಲ್ಲಿರಲಿದೆ ಎಂದು ಉಡುಪಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News