ಸಾಲಿಗ್ರಾಮ ಪ.ಪಂ: ವಿವಿಧೆಡೆ ಮತದಾನ ಪ್ರಾತ್ಯಕ್ಷಿಕೆ
Update: 2019-03-29 22:17 IST
ಉಡುಪಿ, ಮಾ. 29: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನ ಪ್ರಾತ್ಯಕ್ಷಿಕೆ ಮತ್ತು ಅರಿವು ಕಾರ್ಯಕ್ರಮವನ್ನು ಪಾರಂಪಳ್ಳಿ -ಗೆಂಡೆಕೆರೆ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಕಡ, ಯಕ್ಷಗಾನ ಕಲಾ ಕೇಂದ್ರ ಗುಂಡ್ಮಿ ಹಾಗೂ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಅರುಣ್.ಬಿ, ಸಿಬ್ಬಂದಿಗಳಾದ ಕೆ.ಸಿ. ಸೋಮಯಾಜಿ, ಲೋಹಿತ್ ಪಿ, ಪ್ರವೀಣ್, ಕೃಷ್ಣ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಾಲಿಗ್ರಾಮ ಪರಿಸರದ ಬಿಎಲ್ ಒಗಳು ಭಾಗವಹಿ ಸಿದ್ದರು.
ಕಾರ್ಯಕ್ರಮದಲ್ಲಿ ಮತದಾರರಿಗೆ ಮತದಾನದ ಅರಿವು, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಲಾಯಿತು ಹಾಗೂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾ ಯಿತು.