ಹಿರಿಯಕ: ಆಂಗ್ಲಬಾಷೆ ಕಲಿಕೆಯ ಉಪನ್ಯಾಸ

Update: 2019-03-29 16:51 GMT

ಉಡುಪಿ, ಮಾ.29:ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕದಲ್ಲಿ ಆಂಗ್ಲ ಭಾಷಾ ವಿಭಾಗದ ಆಶ್ರಯದಲ್ಲಿ ಆಂಗ್ಲಬಾಷೆಯ ಕಲಿಕೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶಂಕರನಾರಾಯಣ ಮದರ್ ಥೆರೆಸಾ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕ ರಾಮ ಭಟ್ಟ ಮಾತನಾಡಿ, ಆಂಗ್ಲಬಾಷೆಯ ಮೇಲಿನ ಭಯವನ್ನು ಹೋಗಲಾಡಿಸಿದರೆ ಆ ಬಾಷೆಯನ್ನು ಸುಲವಾಗಿ ಕಲಿಯಬಹುದು. ವಿದ್ಯಾರ್ಥಿಗಳಲ್ಲಿ ಆಂಗ್ಲಬಾಷೆಯನ್ನು ಕಲಿಯುವಾಗ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು ಮತ್ತು ಅವುಗಳನ್ನು ಎುರಿಸುವ ರೀತಿಯನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲಬಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಐಕ್ಯುಎಸಿ ವಿಭಾಗದ ಸಂಚಾಲಕಿ ಸುಮನಾ ಬಿ. ವಂದಿಸಿದರು. ವಿದ್ಯಾರ್ಥಿನಿ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News