×
Ad

ಸೊಮಾಲಿಯ: ಸ್ಫೋಟದಲ್ಲಿ ಕನಿಷ್ಠ 15 ಸಾವು

Update: 2019-03-29 23:08 IST

ಮೊಗಾದಿಶು (ಸೊಮಾಲಿಯ), ಮಾ. 29: ಸೊಮಾಲಿಯ ರಾಜಧಾನಿ ಮೊಗಾದಿಶುವಿನ ಜನನಿಬಿಡ ರಸ್ತೆಯೊಂದರಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.

ಮೊಗಾದಿಶುವಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ಮಾಕ ಅಲ್-ಮುಕರಮ ರಸ್ತೆಯಲ್ಲಿ ಸ್ಫೋಟ ಸಂಭವಿಸಿದಾಗ ಜನರ ದೇಹಗಳು ಚೆಲ್ಲಾಪಿಲ್ಲಿಯಾದವು. ಜನರು ಸಮೀಪದ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ.

ಸ್ಫೋಟದಲ್ಲಿಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ವಾಹನಗಳು ಗಾಳಿಯಲ್ಲಿ ಹಾರಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News