×
Ad

ಅಮೆರಿಕದ ನಿವಾಸಿಗಳು ಚೀನಾದ ಬಂಧನ ಕೇಂದ್ರಗಳಲ್ಲಿ

Update: 2019-03-29 23:13 IST

ವಾಶಿಂಗ್ಟನ್, ಮಾ. 29: ಅಮೆರಿಕದ ಪೌರತ್ವ ಪಡೆದವರು ಹಾಗೂ ಆ ದೇಶದಲ್ಲಿ ವಾಸಿಸುವ ಕಾನೂನು ಸ್ಥಾನಮಾನ ಪಡೆದವರು ಸೇರಿದಂತೆ ಅಮೆರಿಕದ ನಿವಾಸಿಗಳನ್ನು ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿರುವ ಬಂಧನ ಕೇಂದ್ರಗಳಲ್ಲಿ ಹಿಡಿದಿಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳುವ ವರದಿ ಮಾಡಿವೆ.

ಆದಾಗ್ಯೂ, ಎಷ್ಟು ಮಂದಿ ಅಮೆರಿಕ ನಿವಾಸಿಗಳನ್ನು ಬಂಸಿಡಲಾಗಿದೆ ಎಂಬ ಬಗ್ಗೆ ನಿಖರ ಸಂಖ್ಯೆಯಿಲ್ಲ ಎಂದು ಸಿಎನ್‌ಎನ್ ವರದಿ ಮಾಡಿದೆ.

‘‘ಕ್ಯಾಲಿಫೋರ್ನಿಯದ ವ್ಯಕ್ತಿಯೊಬ್ಬರ ತಂದೆ ಕ್ಸಿನ್‌ಜಿಯಾಂಗ್‌ಗೆ ಮರಳಿದ ಬಳಿಕ ಅವರಿಂದ ಯಾವುದೇ ಸಂದೇಶ ಬಂದಿಲ್ಲ. 75 ವರ್ಷದ ಅವರು ವಿಚಾರವಾದಿಯಾಗಿದ್ದರು. ಅವರು ಅಮೆರಿಕದಲ್ಲಿ ವಾಸಿಸಲು ಕಾನೂನು ಅನುಮೋದನೆಯನ್ನು ಪಡೆದಿದ್ದರು’’ ಎಂದು ಇಂಟರ್‌ನ್ಯಾಶನಲ್ ರಿಲೀಜಿಯಸ್ ಫ್ರೀಡಂನ ರಾಯಭಾರಿ ಸ್ಯಾಮ್ ಬ್ರೋಬ್ಯಾಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News