×
Ad

ಉಡುಪಿ: 100 ಮಂದಿಯಿಂದ ನೇತ್ರದಾನ ಘೋಷಣೆ

Update: 2019-03-30 19:06 IST

ಉಡುಪಿ, ಮಾ. 30: ಉಡುಪಿ ನೇತ್ರಜ್ಯೋತಿ ಕಾಲೇಜ್ ಆಫ್ ಅಪ್ತಮೆಟ್ರಿ ಮತ್ತು ಪ್ಯಾರಾಮೆಡಿಕಲ್ ಸಾಯನ್ಸಸ್, ಪ್ರಸಾದ್ ನೇತ್ರಾಲಯ, ಬಿಗ್ ಬಝಾರ್‌ಗಳ ಸಂಯುಕ್ತ ಆಶ್ರಯದಲ್ಲಿ ನೇತ್ರದಾನ ಶಿಬಿರವು ಇತ್ತೀಚೆಗೆ ಉಡುಪಿ ಬಿಗ್‌ಬಜಾರ್‌ನಲ್ಲಿ ನಡೆಯಿತು.

ಸುಮಾರು 100 ಮಂದಿ ತಮ್ಮ ನೇತ್ರದಾನದ ಘೋಷಣೆಯನ್ನು ನೊಂದಾ ಯಿಸಿ ಪ್ರಮಾಣಪತ್ರ ಪಡೆದುಕೊಂಡರು. ಈ ಸಂದರ್ಭದಲ್ಲಿ ನೇತ್ರಜ್ಯೋತಿ ಕಾಲೇಜಿನ ಪ್ರಾಂಶುಪಾಲ ರಾಜಿಬ್ ಮಂಡಲ್, ಉಪನ್ಯಾಸಕ ಸಿದ್ಧಾರ್ಥ್, ಆಡಳಿತ ವಿಭಾಗದಿಂದ ಖಾದರ್, ಬಿಗ್ ಬಜಾರ್‌ನ ಸ್ಟೋರ್ ವ್ಯವಸ್ಥಾಪಕ ರಾದ ರಾಘವೇಂದ್ರ ಕೆ. ಮತ್ತು ನೇತ್ರಜ್ಯೋತಿ ಕಾಲೇಜಿನ ಸುಮಾರು 20 ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News