ರಾಷ್ಟ್ರ ಮಟ್ಟದ ಪತ್ರ ಲೇಖನ ಸ್ಪರ್ಧೆ: ಬಹುಮಾನ ವಿತರಣೆ
Update: 2019-03-30 20:22 IST
ಉಡುಪಿ, ಮಾ. 30: ಜನ ಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪತ್ರ ಲೇಖನ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಅಂಚೆ ಇಲಾಖೆ ಆಯೋ ಜಿಸಿದ ರಾಷ್ಟ್ರ ಮಟ್ಟದ ಪತ್ರ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿ 18 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕರ್ನಾಟಕ ವಲಯದಲ್ಲಿ 2ನೇ ಬಹುಮಾನ ಪಡೆದ ಯುವ ಕಲಾವಿದ, ಕುಂದಾಪುರ ನಮ್ಮ ಭೂಮಿ ಸಂಸ್ಥೆಯ ಪ್ರತಿನಿಧಿ ರಾಮಾಂಜಿ ಇವರಿಗೆ ಉಡುಪಿಯ ವಿಭಾಗೀಯ ಅಂಚೆಕಚೇರಿಯಲ್ಲಿ ಇತ್ತೀಚೆಗೆ ನಡೆದ ವಲಯ ಅಂಚೆ ಅದಾಲತ್ ಕಾರ್ಯಕ್ರಮದಲ್ಲಿ ಬಹುಮಾನದ ಮೊತ್ತವನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರು ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಅವರು ರಾಮಾಂಜಿ ಅವರಿಗೆ ಬಹುಮಾನ ಮತ್ತು ನಗದನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಪೋಸ್ಟ್ ಮಾಸ್ಟರ್ ಜನರಲ್ ಕಚೇರಿಯ ಸಹಾಯಕ ನಿರ್ದೇಶಕ ರಾಜಶೇಖರ್ ಭಟ್, ಉಡುಪಿ ಅಂಚೆ ವಿಬಾಗದ ಅಂಚೆ ಅಧೀಕ್ಷಕ ಸುಧಾಕರ ಜಿ.ದೇವಾಡಿಗ ಉಪಸ್ಥಿತರಿದ್ದರು.