×
Ad

ಗ್ರಾಮೀಣ ಭಾರತ ಪ್ರಗತಿ ಸಾಧಿಸಿದರೆ ದೇಶ ಸಮೃದ್ದ: ಸೋಮಯಾಜಿ

Update: 2019-03-30 20:32 IST

ಶಿರ್ವ, ಮಾ. 30: ಗ್ರಾಮೀಣ ಭಾರತ ಪ್ರಗತಿ ಸಾಧಿಸಿದರೆ ಮಾತ್ರ ಭವಿಷ್ಯದ ಭಾರತ ಸಮೃದ್ಧ ಭಾರತವಾಗಲು ಸಾಧ್ಯ ಎಂದು ಕುಂಜಾರುಗಿರಿ ಪಾಜಕ ಶ್ರೀಆನಂದತೀರ್ಥ ವಿದ್ಯಾಲಯದ ಆಡಳಿತಾಧಿಕಾರಿ ಗುರುದತ್ ಸೋಮಯಾಜಿ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಪ್ರಾಥಮಿಕ ಹಾಗೂ ಫ್ರೌಢ ಶಾಲಾ ಶಿಕ್ಷಕ/ಶಿಕ್ಷಕಿಯರಿಗೆ ಶುಕ್ರ ವಾರ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ‘ಗ್ರಾಮೀಣ ಬದುಕು ಮತ್ತು ಶಿಕ್ಷಣ ನೀತಿ’ ವಿಷಯದ ಕುರಿತ ರತ್ನಾವತಿ ದತ್ತಿನಿಧಿ ಉಪನ್ಯಾಸ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಎಲ್ಲರಿಗೂ ಸರ್ವ ಸಮಾನಾಗಿ ಶಿಕ್ಷಣ ಸಿಗುವುದು ಅಗತ್ಯ. ಗ್ರಾಮೀಣ ಪ್ರದೇಶದ ಮಕ್ಕಳು ಬಡತನದಲ್ಲಿಯೇ ಇರು ವುದರಿಂದ ಶಿಕ್ಷಣಕ್ಕೆ ಪೂರಕವಾಗಿರುವ ಸೌಲಭ್ಯಗಳು ಸುಲಭವಾಗಿ ಸಿಗು ವಂತಾಗಬೇಕು. ಆಗ ಮಾತ್ರ ಗ್ರಾಮೀಣ ಮಕ್ಕಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಲ್ವಿನ್ ದಾಂತಿ ಮಾತನಾಡಿ, ಹಿಂದೆ ಸೇವೆಯಾಗಿದ್ದ ಶಿಕ್ಷಣ ಇಂದು ವ್ಯಾಪಾರೀಕರಣಗೊಳ್ಳುತ್ತಿರುವುದು ದುರಂತ. ಯಾವುದೇ ಮಕ್ಕಳು ಹುಟ್ಟು ಪ್ರತಿಬಾವಂತರಲ್ಲ. ಮಕ್ಕಳ ಸುಪ್ತ ಪ್ರತಿಭೆಗಳ ವಿಕಸನದ ಜೊತೆಗೆ ವೌಲ್ಯಾಧಾರಿತ ಪೂರಕ ಪಾಠಗಳ ಮೂಲಕ ಸಂವಹನಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಬದುಕುವ ಶಿಕ್ಷಣಕ್ಕೆ ಒತ್ತು ನೀಡು ವುದು ಇಂದಿನ ಅಗತ್ಯವಾಗಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಸಾಹಿತ್ಯ, ಶಿಕ್ಷಣ ಹಾಗೂ ವಿವಿಧ ಚಟುವಟಿಕೆಗಳಿಗೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ 1700 ದತ್ತಿಗಳನ್ನು ಹೊಂದಿದ್ದು, ಈ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ ಅವರನ್ನು ದತ್ತಿನಿಧಿ ದಾನಿ ರತ್ನಾವತಿ, ಶಂಕರ ಶ್ರೀಯಾನ್ ದಂಪತಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ವಿದ್ಯಾ ಲಯದ ಪ್ರಾಂಶುಪಾಲೆ ಗೀತಾ ಎಸ್.ಕೊಟ್ಯಾನ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಶುಭ ಹಾರ್ಯಸಿದರು.

ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಶಿರ್ವ ವಹಿಸಿದ್ದರು. ತಾಲೂಕು ಸಮಿತಿ ಸದಸ್ಯ ಹರೀಶ್ ಕಟ್ಪಾಡಿ ಸ್ವಾಗತಿಸಿದರು. ತಾಲೂಕು ಘಟಕದ ಕೋಶಾಧ್ಯಕ್ಷ ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News