ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಚುನಾವಣಾ ಕಚೇರಿ ಉದ್ಘಾಟನೆ
Update: 2019-03-30 22:08 IST
ಉಡುಪಿ, ಮಾ.30: ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಬಳಿ ತೆರೆಯಲಾದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ಅವರ ಚುನಾವಣಾ ಕಚೇರಿಯನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಶನಿವಾರ ಉದ್ಘಾಟಿಸಲಾಯಿತು.
ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಯಾವುದೇ ಪಕ್ಷಗಳು ಈ ವರೆಗೆ ಯಾರಿಗೂ ಒಳಿತು ಮಾಡಿಲ್ಲ. ಹಾಗಾಗಿ ಪಕ್ಷಗಳ ಹಿಂದೆ ಹೋಗುವು ದನ್ನು ಬಿಟ್ಟು ಅಭ್ಯರ್ಥಿಗಳ ಹಿನ್ನೆಲೆಯನ್ನು ನೋಡಬೇಕು. ಯುವ ಮತದಾರರು ಯುವ ನಾಯಕ ಅಮೃತ್ ಶೆಣೈ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಅಮೃತ್ ಶೆಣೈ, ನಿವೃತ್ತ ಬ್ಯಾಂಕ್ ಅಧಿಕಾರಿ ಯೋಗೀಶ್ ಭಟ್, ಅಂಗನವಾಡಿ ಕಾರ್ಯಕರ್ತೆ ಸರೋಜ, ಚಿತ್ರ ನಿರ್ಮಾ ಪಕ ಕೃಷ್ಣಪ್ಪ ಉಪ್ಪೂರು, ಸಮಾಜ ಸೇವಕರಾದ ಶಾಹಿದ್ ಅಲಿ, ಜಯಶ್ರೀ ಭಟ್, ಯಜ್ಞೇಶ್ ಆಚಾರ್ಯ, ವರದರಾಜ ಚಿಕ್ಕಮಗಳೂರು, ಅಲೆನ್ ರೋಹನ್ ವಾಝ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಉಪಸ್ಥಿತರಿದ್ದರು.