×
Ad

ಪಿಪಿಸಿ ಪ್ರಾಂಶುಪಾಲ ಡಾ.ಬಿ.ಜಗದೀಶ ಶೆಟ್ಟರಿಗೆ ಬೀಳ್ಕೊಡುಗೆ

Update: 2019-03-30 22:20 IST

ಉಡುಪಿ, ಮಾ.30: ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂರು ದಶಕಗಳಿಗೂ ಅಧಿಕ ಕಾಲ ಉಪನ್ಯಾಸಕರಾಗಿ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಪ್ರಾಂಶುಪಾಲ ರಾಗಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತರಾಗುತ್ತಿರುವ ನಾಡಿನ ಖ್ಯಾತ ಇತಿಹಾಸಜ್ಞ ಡಾ.ಬಿ. ಜಗದೀಶ ಶೆಟ್ಟಿ ಅವರನ್ನು ಇಂದು ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷಡಾ.ಬಿ.ಎಂ.ಸೋಮಯಾಜಿ ಮಾತನಾಡಿ, ಡಾ. ಬಿ.ಜಗದೀಶ ಶೆಟ್ಟರ ಅವಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘ ಕ್ರಿಯಾಶೀಲ ವಾಗಿ ಕಾರ್ಯ ನಿರ್ವಹಿಸಿದ್ದು, ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಕಾಲೇಜಿನ ಇತಿಹಾಸದಲ್ಲಿ ನಿವೃತ್ತಿಯ ದಿನದಂದು ಹಳೆವಿದ್ಯಾರ್ಥಿಗಳು ಅಭಿನಂದಿಸುತ್ತಿರುವುದು ಇದೇ ಪ್ರಥಮವಾಗಿದೆ. ಕಾಲೇಜಿನ ಬೆಳವಣಿಗೆಯಲ್ಲಿ ಜಗದೀಶ ಶೆಟ್ಟರ ಕೊಡುಗೆ ಸ್ಮರಣೀಯವಾಗಿದೆ ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಿ ಎಸ್ ಚಂದ್ರಶೇಖರ ನುಡಿದರು.

ಕಾಲೇಜಿನ ಇತಿಹಾಸದಲ್ಲಿ ನಿವೃತ್ತಿಯ ದಿನದಂದು ಹಳೆವಿದ್ಯಾರ್ಥಿಗಳು ಅಭಿನಂದಿಸುತ್ತಿರುವುದು ಇದೇ ಪ್ರಥಮವಾಗಿದೆ. ಕಾಲೇಜಿನ ಬೆಳವಣಿಗೆಯಲ್ಲಿ ಜಗದೀಶ ಶೆಟ್ಟರ ಕೊಡುಗೆ ಸ್ಮರಣೀಯವಾಗಿದೆ ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ ಜಿ ಎಸ್ ಚಂದ್ರಶೇಖರ ನುಡಿದರು.

ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಉಪಾದ್ಯಕ್ಷೆ ವಿಮಲ ಚಂದ್ರಶೇಖರ, ಮೀನಾ ಎಲ್. ಅಡ್ಯಂತಾಯ, ಕಾರ್ಯದರ್ಶಿ ಮುರಳಿ ಕಡೆಕಾರ್, ಸದಸ್ಯರಾದ ನಾಗರಾಜ್ ಹೆಬ್ಬಾರ್, ಮಂಜುನಾಥ, ಮಧುಸೂದನ್ ಪುತ್ರಾಯ, ಈಶ್ವರ ಚಿಟ್ಪಾಡಿ, ಸ್ನೇಹ ಆಚಾರ್ಯ, ಮಂಜುನಾಥ ಕರಬ, ಸೌಮ್ಯ ಶೆಟ್ಟಿ, ಯಶ್ವಂತ್ ಭಟ್ ಹಾಗೂ ಕಾಲೇಜಿನ ಉಪನ್ಯಾಸಕರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಲೇಜಿನ ನೂತನ ಪ್ರಾಂಶುಪಾಲರಾದ ಡಾ.ಎ.ಪಿ. ಭಟ್‌ರನ್ನು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News