ಇಡ್ಲಿ ಪ್ರೇಮಿಗಳಿಗಾಗಿ ಇಡ್ಲಿ ಉತ್ಸವ

Update: 2019-03-31 06:04 GMT

ಅಬುದಾಬಿ, ಮಾ. 31: ಹೆಚ್ಚಿನವರು ಇಷ್ಟಪಡುವ ಬ್ರೇಕ್‌ಫಾಸ್ಟ್ ಇಡ್ಲಿಗೂ ಒಂದು ದಿನವಿರುವ ಬಗ್ಗೆ ಗೊತ್ತಿರಬಹುದು. ವಿಶ್ವ ಇಡ್ಲಿ ದಿನವಾದ ಮಾ. 30ರಂದು ಅಬುದಾಬಿ ಮದೀನಾ ಝಾಯಿದ್ ಕಾಂಪ್ಲೆಕ್ಸ್‌ನ ಲುಲುನಲ್ಲಿ ಇಡ್ಲಿ ಉತ್ಸವ ಏರ್ಪಡಿಸಲಾಗಿತ್ತು.

ವಿವಿಧ ಬಣ್ಣಗಳ 36 ತರಹದ ಇಡ್ಲಿಗಳನ್ನು ತಯಾರಿಸಿ ಲುಲು ಹೈಪರ್ ಮಾರ್ಕಟ್ ಇಡ್ಲಿ ಪ್ರೇಮಿಗಳನ್ನು ಸ್ವಾಗತಿಸಿತು.ಲುಲುವಿನ ಶೆಫ್‌ಗಳಾದ ಅಜಿತ್ ಶ್ರೀಕಂಠನ್, ಅಮೀರ್, ಶರೀಫ್ ಹಾಗೂ ಮುಸ್ತಫ ಎಂಬವರು ಸೇರಿಕೊಂಡು ಸ್ವಾದಿಷ್ಟವಾದ ಇಡ್ಲಿಗಳನ್ನು ತಯಾರಿಸಿದರು. ಇವರು ವಿವಿಧ ಬಣ್ಣಗಳ ಇಡ್ಲಿಗಳನ್ನು ತಯಾರಿಸುವುದರೊಂದಿಗೆ ಅದಕ್ಕೆ ಹೊಂದಿಕೆಯಾಗುವ ವಿವಿಧ ರೀತಿಯ ಚಟ್ನಿಗಳನ್ನೂ ಸಿದ್ಧಪಡಿಸಿದಾಗ ಇಡ್ಲಿ ಉತ್ಸವಕ್ಕೆ ರಂಗೇರಿತು.

ಇಡ್ಲಿಗೆ ಹೊಸತನ, ಬಣ್ಣ ನೀಡಲು ಪ್ರಕೃತಿದತ್ತ ವಸ್ತುಗಳನ್ನು ಬಳಸಲಾಗಿದೆ. ಕ್ಯಾರೆಟ್, ಬೀಟ್ರೂಟ್, ಹರಿವೆ, ತೆಂಗಿನಕಾಯಿ, ಮಾವು, ಶುಂಠಿ, ಹಲಸು, ಅವಾಕಡೊ ಮುಂತಾದ ಹಣ್ಣುಗಳು, ತರಕಾರಿಗಳನ್ನು ಸೇರಿಸಿ ಇಡ್ಲಿಗಳನ್ನು ವರ್ಣಮಯ ಮಾಡಲಾಗಿದೆ.

ಸ್ಪಿನಾಚ್ ಇಡ್ಲಿ, ಅನಾರ್, ಪೈನಾಪಲ್, ಹೆರ್ಬಲ್, ಮಶ್ರೂಂ, ರವ, ಮಿಕ್ಸೆಡ್, ಸ್ಪೈಸಿ, ಕ್ಯಾರಟ್, ಇಡ್ಲಿ ಮಂಜುರಾನ್, ಮಸಾಲ, ಜಾಕ್‌ಫ್ರುಟ್, ಟೊಮೆಟೊ, ರೆಯಿಂಬೊ, ಜಿಂಜರ್ ಜೊತೆಗೆ ಚಾಕಲೇಟ್ ಇಡ್ಲಿಯನ್ನೂ ತಯಾರಿಸಲಾಗಿತ್ತು. ಆದರೆ ಜಾಕ್‌ಫ್ರುಟ್ ಹಾಗೂ ಸ್ಪಿನಾಚ್ ಇಡ್ಲಿಗೆ ಬೇಡಿಕೆ ಹೆಚ್ಚಿತ್ತು ಎಂದು ಶೆಫ್‌ಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News