×
Ad

ಮಂಗಳೂರು: ಮತದಾನ ಜಾಗೃತಿಗಾಗಿ ಮ್ಯಾರಥಾನ್

Update: 2019-03-31 14:58 IST

ಮಂಗಳೂರು, ಮಾ. 31: ಮತದಾನದ ಬಗ್ಗೆ ಜಾಗೃತಿ ಮೂಡಿಸಲು ರವಿವಾರ ನಗರದ ಮಂಗಳಾ ಸ್ಟೇಡಿಯಂನಲ್ಲಿ ಅಧಿಕಾರಿಗಳು, ಕ್ರೀಡಾಳುಗಳು, ನಾಗರಿಕರು ಮ್ಯಾರಥಾನ್ ನಡೆಸಿದರು.

ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್, ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಸ್ಪಿ ಲಕ್ಷ್ಮೀಪ್ರಸಾದ್, ಸಿಇಒ ಹಾಗೂ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಡಾ ಸೆಲ್ವಮಣಿ ಆರ್. ಮತ್ತಿತರರು ಮತದಾನ ನಮ್ಮ ಹಕ್ಕು, ಕರ್ತವ್ಯ. ಪ್ರಜ್ರಾಭುತ್ವದ ಯಶಸ್ಸಿಗೆ ಮತದಾನ ಮಾಡಿ. ಯುವ ಮತದಾರರು ತಾವು ಮತದಾನ ಮಾಡುವುದರೊಂದಿಗೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಈ ಸಂದರ್ಭ ಮೂರು ವಿಭಾಗದಲ್ಲಿ ಸ್ಫರ್ಧೆ ನಡೆಯಿತು. ಮೊದಲ ವಿಭಾಗದಲ್ಲಿ 16 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಥಮ ಬಹುಮಾನ ಲಕ್ಷ್ಮಣ ಡಿ.ವೈ.ಇ.ಸಿ, ದ್ವಿತೀಯ ಬಹುಮಾನ ಕೆ. ಹನುಮೇಶ ಆಳ್ವಾಸ್, ತೃತೀಯ ಬಹುಮಾನ ಬಸವರಾಜ್ ಗೋಡಿ, ಚತುರ್ಥ ಬಹುಮಾನ ಪ್ರಶಾಂತ್ ಕುಮಾರ್ ಆಳ್ವಾಸ್, 5ನೇ ಬಹುಮಾನ ಸಚಿನ್ ಮಂಗಳೂರು ಪಡೆದುಕೊಂಡರು..

16 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಚೈತ್ರಾ ದೇವಾಡಿಗ ಆಳ್ವಾಸ್, ದ್ವಿತೀಯ ಬಹುಮಾನ ಪ್ರೀಯಾ ಡಿ ಆಳ್ವಾಸ್, ತೃತೀಯ ಬಹುಮಾನ ಪ್ರಿಯಾಂಕ ಎಚ್.ಡಿ ಆಳ್ವಾಸ್, ಚತುರ್ಥ ಬಹುಮಾನ ದೀಕ್ಷಾ ಬಿ ಆಳ್ವಾಸ್, 5ನೇ ಬಹುಮಾನ ಚೈತ್ರಾ ಪಿ. ಆಳ್ವಾಸ್ ಪಡೆದುಕೊಂಡರು.

2ನೇ ವಿಭಾಗದಲ್ಲಿ 16 ವರ್ಷಕ್ಕಿಂತ ಕೆಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಅಂಜುಮಾನ್, ದ್ವಿತೀಯ ಬಹುಮಾನ ಧರ್ಮಪ್ಪ ಬಿ. ಆಳ್ವಾಸ್, ತೃತೀಯ ಬಹುಮಾನ ದಶರತ್ ಆಳ್ವಾಸ್ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನ ಚೈತ್ರಾ ಎನ್.ಸಿ. ಆಳ್ವಾಸ್, ದ್ವಿತೀಯ ಬಹುಮಾನ ವಿಂಧ್ಯಾ ಎನ್. ಆಳ್ವಾಸ್, ತೃತೀಯ ಬಹುಮಾನ ಪ್ರಣಮ್ಯ ಎನ್. ಆಳ್ವಾಸ್ ಪಡೆದುಕೊಂಡರು.

ಸಹಾಯಕ ಚುನಾವಣಾಧಿಕಾರಿ ಗಾಯತ್ರಿ ನಾಯಕ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಘವೀರ್, ಜಿಲ್ಲಾ ಸ್ವೀಪ್ ಸಮಿತಿಯ ಕಾರ್ಯದರ್ಶಿ ಸುಧಾಕರ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News