×
Ad

ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ: ಬಾಳಾಸಾಹೇಬ್ ನಿಖಮ್

Update: 2019-03-31 17:15 IST

ಉಡುಪಿ, ಮಾ.31: ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದ್ದು, ಸ್ವಚ್ಛ ಭಾರತ ಸಂಕಲ್ಪವು ಇಲ್ಲಿ ಪೂರ್ಣ ಗೊಂಡಿದೆ ಎಂದು ಕಾರವಾರ ಕೊಂಕಣ ರೈಲ್ವೆಯ ಪ್ರಾದೇಶಿಕ ವ್ಯವಸ್ಥಾಪಕ ಬಾಳಾಸಾಹೇಬ್ ಬಿ.ನಿಖಮ್ ಹೇಳಿದ್ದಾರೆ.

ರೋಟರಿ ಕ್ಲಬ್ ಅಂಬಲಪಾಡಿ ವತಿಯಿಂದ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಕಲ್ಪಿಸಲಾದ ಪ್ರಯಾಣಿಕರ ತಂಗುದಾಣವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರೈಲ್ವೆ ನಿಲ್ದಾಣದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಇನ್ಸರೆಟರ್ ಯಂತ್ರವನ್ನು ಉದ್ಘಾಟಿಸಿದ ರೋಟರಿಯ ಜಿಲ್ಲಾ ಗವರ್ನರ್ ರಾಜರಾಮ್ ಭಟ್ ಮಾತ ನಾಡಿ, ಈಗಾಗಲೇ ಅಂಬಲಪಾಡಿ ರೋಟರಿ ಸಂಸ್ಥೆಯ ಮೂಲಕ ವಿವಿಧ ಕಡೆಗಳಿಗೆ ಈ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ರೈಲು ನಿಲ್ದಾಣದ ಅತ್ಯವಶ್ಯಕತೆಯನ್ನು ಮನಗಂಡು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ ಎಂದರು.

ಉಡುಪಿ ರೈಲ್ವೆ ಯಾತ್ರೀ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಮಾತನಾಡಿದರು. ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಮಂಗಳೂರು ಪ್ರಾದೇಶಿಕ ಟ್ರಾಫಿಕ್ ಅಧಿಕಾರಿ ವಿನಯ ಕುಮಾರ್, ರೋಟರಿ ಕ್ಲಬ್‌ನ ಸಹಾಯಕ ಗವರ್ನರ್ ಸುಬ್ಬಣ್ಣ ಪೈ, ಮಾಜಿ ಸಹಾಯಕ ಗವರ್ನರ್ ಬಿ.ಎಂ.ಭಟ್, ರೋಟರಿ ಪ್ರಮುಖರಾದ ಅಲೆನ್ ವಿ.ಲೂವಿಸ್, ಎಚ್.ಜಯಪ್ರಕಾಶ್ ಕೆದಿಲಾಯ, ಅರುಣ್ ಕುಮಾರ್ ಶೆಟ್ಟಿ, ದುರ್ಗಾಪ್ರಸಾದ್ ಕೆ.ಎಲ್. ಉಪಸ್ಥಿತರಿದ್ದರು.

ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಖಲೀಲ್ ಅಹ್ಮದ್ ಸಾ್ವಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News