×
Ad

ವಿಜಯಾ ಬ್ಯಾಂಕ್ ಮುಚ್ಚುಗಡೆ : ಎ.1: ಕಪ್ಪು ದಿನ ಆಚರಣೆ

Update: 2019-03-31 18:18 IST

ಮಂಗಳೂರು, ಮಾ.31: ಕರಾವಳಿಯ ಜನರ ಆಗ್ರಹವನ್ನು ಕಡೆಗಣಿಸಿ ವಿಜಯಾ ಬ್ಯಾಂಕ್ ಅನ್ನು ಗುಜರಾತಿನ ಬ್ಯಾಂಕ್ ಆಫ್ ಬರೋಡಾ ಜೊತೆ ಎಪ್ರಿಲ್ 1 ರಿಂದ ಅಧಿಕೃತವಾಗಿ ವಿಲೀನಗೊಳಿಸುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಎ.1ರಂದು ಬೆಳಗ್ಗೆ 10ಕ್ಕೆ ಸಮಾನ ಮನಸ್ಕರು ಸೇರಿ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದ ಬಳಿಯಿರುವ ವಿಜಯಾ ಬ್ಯಾಂಕ್ ಪ್ರಧಾನ ಕಚೇರಿಯ ಮುಂದೆ ಕಪ್ಪುದಿನ ಆಚರಣೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಎ.1ರಂದು ಬೆಳಗ್ಗೆ 10:30ಕ್ಕೆ ಕದ್ರಿ ಮಲ್ಲಿಕಟ್ಟೆಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಯ ಮುಂದೆ ಕರಾಳ ದಿನ ಆಚರಿಸಲಾಗುವುದು ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News