ಬಂಟ್ವಾಳ: ಈ ಸರಕಾರಿ ಶಾಲೆಯಲ್ಲಿದ್ದಾರೆ 10 ಜೋಡಿ ಅವಳಿ-ಜವಳಿ ವಿದ್ಯಾರ್ಥಿಗಳು !
ಬಂಟ್ವಾಳ, ಮಾ. 31: ಒಂದು ಶಾಲೆ ಅಥವಾ ಕಾಲೇಜಿನಲ್ಲಿ ಹೆಚ್ಚೆಂದರೆ ಎರಡು ಮೂರು ಜೋಡಿ ಅವಳಿ-ಜವಳಿ ಮಕ್ಕಳನ್ನು ನೋಡಬಹುದು. ಆದರೆ, ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ 10 ಜೋಡಿ ಅವಳಿ-ಜವಳಿ ವಿದ್ಯಾರ್ಥಿಗಳಿದ್ದು ಅಚ್ಚರಿ ಮೂಡಿಸಿದ್ದಾರೆ.
ಮನ್ವಿತ್ ಆರ್-ಮನೀಷ್ ಆರ್, ಸೂರಜ್ ಶೆಣೈ-ಸುದೀಪ್ ಶೆಣೈ, ಅಮಿತ್ ಪಿ.- ನಮಿತ್ ಪಿ, ಜನಾರ್ದನ- ಜಲಜಾಕ್ಷಿ, ಲತಾ-ಲಕ್ಷ್ಮೀ, ಅಭಿಷೇಕ್- ಅಭಿಜಿತ್, ಹರ್ಷಾ ಎಂ ಕುಲಾಲ್- ಹರ್ಷಿತ ಎಂ.ಕುಲಾಲ್, ಸುರಕ್ಷಾ-ಸಮೀಕ್ಷಾ, ಶೋಭಾ- ಶೋಭಿತಾ, ಸೌಮ್ಯ- ಸೌಜನ್ಯ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅವಳಿ-ಜವಳಿ ವಿದ್ಯಾರ್ಥಿಗಳು.
ಈ ಪೈಕಿ ಜನಾರ್ದನ ಮತ್ತು ಜಲಜಾಕ್ಷಿ ಹಾಗೂ ಹರ್ಷ ಎಂ ಕುಲಾಲ್ ಹಾಗೂ ಹರ್ಷಿತಾ ಎಂ.ಕುಲಾಲ್ ಅವಳಿ ಹುಡುಗ ಹುಡಗಿಯಾಗಿದ್ದಾರೆ. ಹತ್ತು ಜೋಡಿ ವಿದ್ಯಾರ್ಥಿಗಳು ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಶಿಕ್ಷಕರು ಅವರನ್ನು ಗುರುತಿಸಲು ಕಷ್ಟಪಡಬೇಕಾಗುತ್ತದೆ. ಆದರೂ, ಸಣ್ಣ ಪುಟ್ಟ ವ್ಯತ್ಯಾಸಗಳಿಂದ ಅವರನ್ನು ಪರಸ್ಪರ ಗುರುತಿಸಲಾಗುತ್ತದೆ ಎನ್ನುತ್ತಾರೆ ಶಾಲೆಯ ಶಿಕ್ಷಕ ಹರಿಪ್ರಸಾದ್ ಅವರು.