×
Ad

ಡ್ರಗ್ಸ್ ದಂಧೆ: 24 ಗ್ರಾಂ ಎಂಡಿಎಂ ಪತ್ತೆ

Update: 2019-03-31 22:43 IST

ಮಂಗಳೂರು, ಮಾ.31: ನಗರದ ಪಿವಿಎಸ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸವಿದ್ದು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಂಟ್ವಾಳ ನೆತ್ತರಕೆರೆ ನಿವಾಸಿ ಜಾವೆದ್ (28) ಹಾಗೂ ತೊಕ್ಕೊಟ್ಟು ನಿವಾಸಿ ಶಾನವಾಝ್ (33) ಬಂಧಿತರು. ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಇನ್ನೋರ್ವ ಆರೋಪಿ ಮುಂಬೈಯವನಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತರಿಂದ 72 ಸಾವಿರ ರೂ. ಮೌಲ್ಯದ 24 ಗ್ರಾಂ ಎಂಡಿಎಂ ಡ್ರಗ್ಸ್, ಬೈಕ್, ಮೊಬೈಲ್ ಸೇರಿದಂತೆ ಒಟ್ಟು 2.20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಆರೋಪಿ ಜಾವೆದ್ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಶಾನವಾಝ್ ಮಧ್ಯವರ್ತಿಯಾಗಿ ಮುಂಬೈ ವ್ಯಕ್ತಿಯಿಂದ ಡ್ರಗ್ಸ್ ತಂದು ಕೊಡುತ್ತಿದ್ದ. ಆರಂಭದಲ್ಲಿ ಜಾವೆದ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಿಬ್ಬರು ಆರೋಪಿಗಳ ವಿವರ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಆರ್‌ಬಿ ಎಸಿಪಿ ವಿನಯ ಗಾಂವ್ಕರ್, ಆರ್ಥಿಕ ಅಪರಾಧ ಪತ್ತೆ ವಿಭಾಗದ ನಿರೀಕ್ಷಕ ರಾಮಕೃಷ್ಣ, ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News