ಎಲ್ಲ ರೈಲ್ವೆ ವಲಯಗಳ ಆವರಣಗಳಿಂದ ರಾಜಕೀಯ ಜಾಹೀರಾತುಗಳನ್ನು ತೆಗೆಯಲು ಆದೇಶ

Update: 2019-03-31 17:34 GMT

ಹೊಸದಿಲ್ಲಿ,ಮಾ.31: ಮಾದರಿ ನೀತಿ ಸಂಹಿತೆಯ ಸರಣಿ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ರೈಲ್ವೆ ಆವರಣಗಳಿಂದ ಎಲ್ಲ ವಿಧಗಳ ರಾಜಕೀಯ ಜಾಹೀರಾತುಗಳನ್ನು ತೆಗೆಯುವಂತೆ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ಯಾದವ ಅವರು ಎಲ್ಲ ರೈಲ್ವೆ ವಲಯಗಳಿಗೆ ರವಿವಾರ ಲಿಖಿತರೂಪದಲ್ಲಿ ಆದೇಶಿಸಿದ್ದಾರೆ.

ನೀತಿ ಸಂಹಿತೆಯು ಜಾರಿಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಹೊಂದಿದ್ದ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ಏಕೆ ವಿತರಿಸಲಾಗಿತ್ತು ಎನ್ನುವುದನ್ನು ವಿವರಿಸುವ ಅನಿವಾರ್ಯತೆಗೆ ರೈಲ್ವ್ವೆಯು ಸಿಲುಕಿತ್ತು. ಇದರ ಬೆನ್ನಲ್ಲೇ ರೈಲ್ವೆ ಮಂಡಳಿಯ ಈ ಆದೇಶ ಹೊರಬಿದ್ದಿದೆ.

ಎರಡು ದಿನಗಳ ಹಿಂದಷ್ಟೇ ‘ಮೈ ಭೀ ಚೌಕಿದಾರ್ ಹೂಂ’ ಎಂಬ ಬಿಜೆಪಿಯ ಚುನಾವಣಾ ಪ್ರಚಾರದ ಘೋಷಣೆಯನ್ನು ಹೊಂದಿದ್ದ ಚಹಾ ಕಪ್ ಅನ್ನು ಶತಾಬ್ದಿ ರೈಲಿನಲ್ಲಿ ವಿತರಿಸಿದ್ದು ಕೋಲಾಹಲವನ್ನು ಸೃಷ್ಟಿಸಿತ್ತು.

ರೈಲ್ವೆ ಟಿಕೆಟ್,ಇತರ ಯಾವುದೇ ರೈಲ್ವೆ ಸ್ಟೇಷನರಿ,ರೈಲು ಬೋಗಿಗಳು,ರೈಲು ನಿಲ್ದಾಣಗಳು,ಇತರ ಯಾವುದೇ ರೈಲು ಆವರಣಗಳಲ್ಲಿಯ ಯಾವುದೇ ರಾಜಕೀಯ ನಾಯಕರ ಚಿತ್ರವನ್ನು ಹೊಂದಿರುವ ಯಾವುದೇ ಜಾಹೀರಾತನ್ನು ತಕ್ಷಣವೇ ತೆಗೆಯಬೇಕು ಮತ್ತು ಈ ಬಗ್ಗೆ ಜಾಹೀರಾತು ಏಜೆನ್ಸಿಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ವಲಯ ಮಹಾ ಪ್ರಬಂಧಕರು ಮತ್ತು ವಿಭಾಗೀಯ ಪ್ರಬಂಧಕರಿಗೆ ನೀಡಿರುವ ಆದೇಶದಲ್ಲಿ ಯಾದವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News