×
Ad

ಯಕ್ಷಗಾನ ಕಲಾವಿದರಿಗೆ ಸಂಸ್ಮರಣಾ ಪ್ರಶಸ್ತಿ ಪ್ರದಾನ

Update: 2019-04-01 20:31 IST

ಬ್ರಹ್ಮಾವರ, ಎ.1: ಮಟಪಾಡಿ ಶ್ರೀನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಯ 53ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಗುರುವಂದನೆ ಕಾರ್ಯಕ್ರಮವು ಮಟಪಾಡಿಯ ಗುರು ವೀರಭದ್ರ ನಾಯಕ್ ಸ್ಮಾರಕ ರಂಗಮಂಟಪದಲ್ಲಿ ಶನಿವಾರ ನಡೆಯಿತು

ಅಧ್ಯಕ್ಷತೆಯನ್ನು ಗಿರಿಜಾ ದರ್ಶನ ಕ್ಲಿನಿಕ್‌ನ ಡಾ.ಬಾಲಕೃಷ್ಣ ಶೆಟ್ಟಿ ಕುಂಜಾಲು ವಹಿಸಿದ್ದರು. ಇದೆ ಸಂದರ್ಭದಲ್ಲಿ ಕೋಡಿ ವಿಶ್ವನಾಥ ಗಾಣಿಗ ಅವರಿಗೆ ಗುರು ವೀರಭದ್ರ ನಾಯ್ಕ ಸಂಸ್ಮರಣಾ ಪ್ರಶಸ್ತಿ ಮತ್ತು ಸ್ತ್ರೀ ವೇಷಧಾರಿ ಎಂ.ಎ.ನಾಯ್ಕ ಅವರಿಗೆ ವೇದಮೂರ್ತಿ ಶ್ರೀನಿವಾಸ ಕಲ್ಕೂರ ಸಂಸ್ಮರಣಾ ಪ್ರಶಸ್ತಿಯನ್ನು ಪ್ರಾನ ಮಾಡಲಾಯಿತು.

ಸಂಘದ ಗುರುಗಳಾದ ತೋನ್ಸೆ ಜಯಂತ ಕುಮಾರ್ ಅವರಿಗೆ ಗುರುವಂದನೆ ಮತ್ತು ಸನ್ಮಾನ ನೆರವೇರಿಸಲಾಯಿತು. ಸಂಘದ ಗೌರವಾಧ್ಯಕ್ಷ ಎಂ.ಚಂದ್ರ ಶೇಖರ ಕಲ್ಕೂರ, ಅಧ್ಯಕ್ಷ ಸ್ಯಾಮ್ಸನ್ ಸಿಕ್ವೇರ, ಕಾರ್ಯದರ್ಶಿ ಶ್ಯಾಮರಾಯ ಆಚಾರ್ಯ, ಸದಾನಂದ ಪಾಟೀಲ್, ರಾಘವೇಂದ್ರ ಕಲ್ಕೂರ ಮಟಪಾಡಿ ಉಪಸ್ಥಿತರಿದ್ದರು.
ಮಣಿಪಾಲ ಎಂಐಟಿ ಪ್ರಾಧ್ಯಾಪಕ ಎಸ್.ವಿ.ಉದಯಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ರಾಘವೇಂದ್ರ ಆಚಾರ್ಯ ಹಾಗೂ ಶರತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೋನ್ಸೆ ಜಯಂತ ಕುಮಾರ್ ನಿರ್ದೆಶನದಲ್ಲಿ ಸಂಘದ ಸದಸ್ಯರಿಂದ ಸುಭಾಹು ಕಾಳಗ ಯಕ್ಷಗಾನ ಬಯಲಾಟನಡೆಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News