×
Ad

ಮಂಗಳೂರು: ಬಿ.ಎ.ಸನದಿಗೆ ಕಸಾಪದಿಂದ ಶ್ರದ್ಧಾಂಜಲಿ

Update: 2019-04-01 20:44 IST

 ಮಂಗಳೂರು, ಎ.1: ಮುಂಬೈಯಲ್ಲಿ ಕನ್ನಡ ರಾಯಭಾರಿಯಾಗಿ ಮಹೋನ್ನತ ಸೇವೆ ಸಲ್ಲಿಸಿದ ಕವಿ ಸಾಹಿತಿ ಬಿ.ಎ. ಸನದಿ ಅವರ ನಿಧನದ ಬಗ್ಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಕವಿಯಾಗಿ ಕನ್ನಡ ಪ್ರೇಮಿಯಾಗಿ, ಸಾಹಿತಿಯಾಗಿ ಸನದಿಯವರು ಗೈದ ಸಾಧನೆಯನ್ನು ವಿವರಿಸಿದರು. ಡಾ.ಶಿವರಾಮ ಕಾರಂತ ಪ್ರಶಸ್ತಿಯನ್ನು ಕಲ್ಕೂರ ಪ್ರತಿಷ್ಠಾನದಿಂದ ಸನದಿ ಅವರಿಗೆ ನೀಡಿರುವುದನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಡಾ.ಎಂ.ಪ್ರಭಾಕರ ಜೋಶಿ, ಕೊಳುವೈಲು ಗೋಪಾಲಕೃಷ್ಣ ರಾವ್, ಅಂಗಡಿ ಮಾರು ವಿಶ್ವೇಶ್ವಮಯ್ಯ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಮ್ಮಯ್ಯ, ಮೋಹನ ರಾವ್, ಹರಿಕೃಷ್ಣ ಪುನರೂರು ಜನಾರ್ದನ ಹಂದೆ, ನಿತ್ಯಾನಂದ ಕಾರಂತ ಪೊಳಲಿ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News