ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ: ಕಡ್ಡಾಯ ಹಾಜರಾತಿಗೆ ಸೂಚನೆ
ಉಡುಪಿ, ಎ.1: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದೇಶ ಪಡೆದ ಎಲ್ಲಾ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮಾ.31ರಂದು ಮೊದಲ ಹಂತದ ತರಬೇತಿಯನ್ನು ವಿಧಾನಸಭಾ ಕ್ಷೇತ್ರವಾರು ನಡೆಸಲಾಗಿದೆ.
ಈ ತರಬೇತಿಯಲ್ಲಿ ಈಗಾಗಲೇ ಪಿಯುಸಿ ಮೌಲ್ಯಮಾಪನದ ಕರ್ತವ್ಯ ನಿರ್ವಹಿಸುತಿದ್ದ ಅಧ್ಯಾಪಕರು ಹಾಗೂ ಈ ಹಿಂದೆ ವಿವಿಧ ವೈಯಕ್ತಿಕ ಕಾರಣ ಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ನೀಡಿ ಮಾ.31ರ ತರಬೇತಿಗೆ ಗೈರು ಹಾಜರಾಗಿರುವ ಉಡುಪಿ, ಕಾಪು, ಬೈಂದೂರು, ಕುಂದಾಪುರ ಹಾಗೂ ಕಾರ್ಕಳ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಎ.6ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿ ಸೈಂಟ್ ಸಿಸಿಲಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ತರಬೇತಿಗೆ ಕಡ್ಡಾುವಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ಗೈರುಹಾಜರಾದ ಅಧಿಕಾರಿಗಳ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಕಠಿಣ ಕ್ರಮ ಜರಗಿಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.