×
Ad

ತೆಂಕನಿಡಿಯೂರು: ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ

Update: 2019-04-01 21:43 IST
ಸುಮಾ, ದೀಕ್ಷಾ, ಮನೀಷ

ಉಡುಪಿ, ಎ.1: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮೂವರು ವಿದ್ಯಾರ್ಥಿಗಳಿಗೆ ಈ ಬಾರಿಯ ಮಂಗಳೂರು ವಿಶ್ವವಿದ್ಯಾನಿಲಯದ ಚಿನ್ನದ ಪದಕಗಳು ಹಾಗೂ ಪ್ರಶಸ್ತಿಗಳು ಲಭಿಸಿವೆ.

ಕಾಲೇಜಿನಲ್ಲಿ 2017-18ನೇ ಸಾಲಿನಲ್ಲಿ ದ್ವಿತೀಯ ಎಂ.ಕಾಂ. ಅಧ್ಯಯನ ಮಾಡಿ ಪ್ರಥಮ ರ್ಯಾಂಕ್ ಪಡೆದಿರುವ ಸುಮಾ ಇವರು ಮಂಗಳೂರು ವಿವಿ ಕೊಡಮಾಡುವ ಶ್ರೀಮತಿ ಲಕ್ಷ್ಮಿ ಸೋಮ ಬಂಗೇರ ಕೋಡಿ ಕನ್ಯಾಣ ಮೆಮೋರಿಯಲ್ ಗೋಲ್ಡ್ ಮೆಡಲ್, ಮಂಗಳಗಂಗೋತ್ರಿ ಕಾಮರ್ಸ್ ಪಯೋನೀರ್‌ ಗೋಲ್ಡ್ ಮೆಡಲ್ ವಿಭಾಗದ ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ದ್ವಿತೀಯ ಎಂ.ಎ. ಕನ್ನಡ ವಿಭಾಗದ ದೀಕ್ಷಾ ಇವರು ತುಳುವ ಅಧ್ಯಯನದ ತುಳು ಭಾಷೆ ಮತ್ತು ಸಾಹಿತ್ಯ ವಿಷಯದಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ಗರಿಷ್ಠ ಅಂಕಪಡೆದು (ಎಎ+) ವಿವಿ ಮಟ್ಟದಲ್ಲಿ ಅತ್ಯುನ್ನತ ಗ್ರೇಡ್ ಪಡೆದು ಮಂಗಳೂರು ವಿಶ್ವವಿದ್ಯಾನಿಲಯ ನೀಡುವ ಪೆರುವಾಯಿ ಸುಬ್ಬಯ್ಯ ಶೆಟ್ಟಿ ಸ್ಮಾರಕ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.

ದ್ವಿತೀಯ ಎಂ.ಎ.ಕನ್ನಡ ವಿಭಾಗದ ಮನೀಷ ಇವರು ನಾಲ್ಕನೇ ಸೆಮಿಸ್ಟರ್ ನಲ್ಲಿ ತುಳುವ ಅಧ್ಯಯನದ ತುಳು ಭಾಷೆ ಮತ್ತು ಸಾಹಿತ್ಯ ವಿಷಯದಲ್ಲಿ ಮಂಗಳೂರು ವಿವಿಯಲ್ಲಿ ಗರಿಷ್ಠ ಅಂಕಪಡೆದು (ಎಎ+) ಅಂಕಗಳೊಂದಿಗೆ ವಿವಿ ಮಟ್ಟದಲ್ಲಿ ಅತ್ಯುನ್ನತ ಗ್ರೇಡ್ ಪಡೆದಿರುವುದಕ್ಕಾಗಿ ಮಂಗಳೂರು ವಿವಿ ನೀಡುವ ಪೆರುವಾಯಿ ಸುಬ್ಬಯ್ಯ ಶೆಟ್ಟಿ ಸ್ಮಾರ ನಗದು ಬಹುಮಾನ ಪಡೆದಿದ್ದಾರೆ.

ಇವರೆಲ್ಲರಿಗೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News