×
Ad

ಸಾಲಿಗ್ರಾಮ ಪ.ಪಂ: ವ್ಯಾಪಾರೋದ್ದಿಮೆ ಪರವಾನಗಿ ನವೀಕರಣಕ್ಕೆ ಸೂಚನೆ

Update: 2019-04-01 21:45 IST

ಉಡುಪಿ, ಎ.1: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉದ್ದಿಮೆ ದಾರರು 2019-20ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣವನ್ನು ಎಪ್ರಿಲ್ ತಿಂಗಳ ಒಳಗೆ ನಿಗದಿತ ದಾಖಲೆಗಳಾದ ಉದ್ಯಮ ನಡೆಸುತ್ತಿರುವ ವಾಣಿಜ್ಯ ಕಟ್ಟಡದ ಚಾಲ್ತಿ ಸಾಲಿನ ತೆರಿಗೆ ಪ್ರತಿ/ ಅಂಗಡಿ ಬಾಡಿಗೆ ಕರಾರು ಪತ್ರ ಹಾಗೂ ಅಫಿದಾವಿತ್‌ನೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬಹುದು.

ಅವಧಿ ಮೀರಿ ಪಾವತಿಸಿದ್ದಲ್ಲಿ ಸರಕಾರದ ಸುತ್ತೋಲೆಯಂತೆ ಮೇ 31 ಒಳಗಿನ ಅವಧಿಗೆ ಶೇ.25, ಜೂನ್ 1ರಿಂದ ಆಗಸ್ಟ್ 31ರ ಒಳಗಿನ ಅವಧಿಗೆ ಶೇ.50, ಸೆಪ್ಟೆಂಬರ್ 1ರಿಂದ ನವೆಂಬರ್ 30ರ ಒಳಗಿನ ಅವಧಿಗೆ ಶೇ.75 ಹಾಗೂ ಡಿಸೆಂಬರ್ ತಿಂಗಳ ಬಳಿಕದ ಅವಧಿಗೆ ಶೇ.100ರಷ್ಟು ವಿಂಬ ಶುಲ್ಕ ಪಾವತಿಸಬೇಕಾಗುತ್ತದೆ.

ಅವಧಿ ಮೀರಿ ಪಾವತಿಸಿದ್ದಲ್ಲಿ ಸರಕಾರದ ಸುತ್ತೋಲೆಯಂತೆ ಮೇ 31 ಒಳಗಿನ ಅವಧಿಗೆ ಶೇ.25, ಜೂನ್ 1ರಿಂದ ಆಗಸ್ಟ್ 31ರ ಒಳಗಿನ ಅವಧಿಗೆ ಶೇ.50, ಸೆಪ್ಟೆಂಬರ್ 1ರಿಂದ ನವೆಂಬರ್ 30ರ ಒಳಗಿನ ಅವಧಿಗೆ ಶೇ.75 ಹಾಗೂ ಡಿಸೆಂಬರ್ ತಿಂಗಳ ಬಳಿಕದ ಅವಧಿಗೆ ಶೇ.100ರಷ್ಟು ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ಪರವಾನಿಗೆ ಪಡೆಯದೆ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ಪಟ್ಟಣ ಪಂಚಾಯತ್ ಕಚೇರಿಗೆ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ತಪ್ಪಿದ್ದಲ್ಲಿ ಕರ್ನಾಟಕ ಪುರಸಭೆ ಕಾಯ್ದೆ ಪ್ರಕಾರ ದಂಡನೆ ವಿಧಿಸಿ, ಸೂಕ್ತ ಕ್ರಮ ಕೈಗೊಳ್ಳಲಾ ಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಲ್ಲದೇ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಎಲ್ಲಾ ಗೂಡಂಗಡಿ ವ್ಯಾಪಾರಸ್ಥರು ಕೂಡಲೇ ಅಂಗಡಿಗಳನ್ನು ತೆರವುಗೊಳಿಸುವಂತೆಯೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News