×
Ad

ಕುಡುಪು: ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

Update: 2019-04-01 22:00 IST

ಮಂಗಳೂರು, ಎ.1: ಸಮೀಪದ ಕುಡುಪು ಗೃಹ ಮಂಡಳಿಯ ನಿವೇಶನದಲ್ಲಿ ನೂತನವಾಗಿ ನಿರ್ಮಿಸಿದ ಬ್ಯಾಡ್ಮಿಂಟನ್ ಒಳಾಂಗಣವನ್ನು ಶ್ರೀದೇವಿ ಎಜುಕೇಶನಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಪಿ.ಸದಾನಂದ ಶೆಟ್ಟಿ ಉದ್ಘಾಟಿಸಿದರು.

ಪಾಲ್ದನೆ ಸಂತ ತೆರೆಜಾ ಚರ್ಚ್‌ನ ಧರ್ಮಗುರು ವಂ.ಫಾ. ವಿಕ್ಟರ್ ವಿನ್ಸೆಂಟ್ ಮೆನೇಜಸ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಭಾಸ್ಕರ್ ಕೆ., ಕೆ.ಎಚ್.ಬಿ. ಲೇಔಟಿನ ಮಾಲಕರ ಸಂಘದ ಅಧ್ಯಕ್ಷ ಕೆ.ಜನಾರ್ದನ ಬಾಬು, ಪೋರ್‌ವಿಂಡ್ಸ್ ಸಂಸ್ಥೆಯ ನಿರ್ದೇಶಕ ಇ.ಫೆರ್ನಾಂಡಿಸ್, ಧರ್ಮಶಾಸ್ತ ಮಂದಿರದ ಆಡಳಿತ ಟ್ರಸ್ಟಿ ರಾಮ್‌ಪ್ರಸಾದ್ ಎಸ್. ಮಾತನಾಡಿ ಶುಭ ಹಾರೈಸಿದರು.

ಬಳಿಕ ಈ ಬ್ಯಾಡ್ಮಿಂಟನ್ ಒಳಾಂಗಣವನ್ನು ನಿರ್ಮಿಸಿ ಇಲ್ಲಿನ ಮಕ್ಕಳಿಗೆ ಆಡಲು ಅವಕಾಶ ಕಲ್ಪಿಸಿದ ರಾಜೇಶ್ ಹಾಗೂ ಸ್ಯಾಂಡ್ರಾ ದಂಪತಿಯನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಾಧನೆ ಮಾಡಿದ ಸ್ಪಂದನ ಬೇಕಲ್ ಹಾಗೂ ತ್ರಿಶ್ಯಾ ವೇಗಸ್ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ ವೇಗಸ್ ಸ್ವಾಗತಿಸಿ, ತ್ರಿಶ್ಯಾ ಮೇಗಸ್ ವಂದಿಸಿದರು. ಯಶಸ್ವಿ ಸಿ.ಕೆ. ಅಮಿನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News