×
Ad

ಸುಳ್ಯ ಟಿಎಪಿಸಿಎಂಎಸ್ ಚುನಾವಣೆ: ರಾಜೇಂದ್ರಕುಮಾರ್ ಸಹಕಾರಿ ಬಳಗ ಜಯಭೇರಿ

Update: 2019-04-01 22:05 IST

ಮಂಗಳೂರು, ಎ.1: ಸುಳ್ಯ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಸುಳ್ಯ ಟಿಎಪಿಸಿಎಂಎಸ್ ಸಂಸ್ಥೆಗೆ ರವಿವಾರ ಚುನಾವಣೆ ನಡೆದಿದ್ದು, ರಾಜೇಂದ್ರ ಕುಮಾರ್ ಸಹಕಾರಿ ಬಳಗ ಜಯಭೇರಿ ಬಾರಿಸಿದೆ.

ಸುಳ್ಯ ಟಿಎಪಿಸಿಎಂಎಸ್ ಸಂಸ್ಥೆಗೆ 13 ಮಂದಿ ನಿರ್ದೇಶಕರ ಆಯ್ಕೆಯಾಗಬೇಕಾಗಿದ್ದು, ಇದರಲ್ಲಿ ರಾಜೇಂದ್ರ ಕುಮಾರ್ ಸಹಕಾರಿ ಬಳಗದ 8 ಮಂದಿ ನಿರ್ದೇಶಕರು ಆಯ್ಕೆಗೊಂಡಿದ್ದಾರೆ.

ಎಂ.ಬಿ. ನಿತ್ಯಾನಂದ, ಜಯರಾಮ ಪಿ.ಸಿ., ಸೋಮಶೇಖರ ಕೊಂಗಾಜೆ, ಬೆಟ್ಟ ಉದಯಕುಮಾರ್, ಸತೀಶ್ ಕೂಜುಗೋಡು, ವಿನೋದ ಮಲ್ಲಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗಂಗಾಧರ ಪಿ.ಎಸ್. ಹಾಗೂ ಬೀರಾಮೊಯಿದ್ದೀನ್ ಕೆ. ಚುನಾವಣೆಯಲ್ಲಿ ಆಯ್ಕೆಗೊಂಡಿರುತ್ತಾರೆ. ಬಿಜೆಪಿ ಬೆಂಬಲಿತರ ಪೈಕಿ ನಿರ್ದೇಶಕ ಮಂಡಳಿಗೆ 5 ಮಂದಿ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News